ಪಾಲಕರ ಪತ್ತೆಗೆ ಸಹಕರಿಸಲು ಸೂಚನೆ

  ಕೊಪ್ಪಳದ ಸರಕಾರಿ ಬಾಲಕರ ಬಾಲ ಮಂದಿರದಲ್ಲಿದ್ದ ಸಂಜು (ಮೈಸೂರು), ವಯಸ್ಸು -೧೬ (ಅಂದಾಜು) ಎಂಬ ಬಾಲಕನ ಪಾಲಕರ ಪತ್ತೆಗೆ ಸಹಕರಿಸುವಂತೆ ಕೊಪ್ಪಳದ ಸರಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 
೨೦೧೫ ರ ಫೆ.೦೧ ರಂದು ಗಂಗಾವತಿ ನಗರದಲ್ಲಿ ಈ ಬಾಲಕನ್ನು ರಕ್ಷಿಸಲಾಗಿದ್ದು, ಪ್ರಸ್ತುತ ಬಾಲಕನು, ಬಾಲಕರ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದಾನೆ. ಈತ ತಮಿಳು ಭಾಷೆ ಬಲ್ಲವನಾಗಿದ್ದು, ಅಲ್ಪ ಸ್ವಲ್ಪ ಕನ್ನಡದಲ್ಲಿ ಮಾತನಾಡುತ್ತಾನೆ. ಪತ್ತೆಯಾಗಿರುವ ಬಾಲಕನ ವಿವರ ಇಂತಿದೆ. ಬಾಲಕನ ತೂಕ :೪೫ ಕೆ.ಜಿ, ಎತ್ತರ :೧೫೪ ಸೆಂ.ಮೀ, ಗೋದಿ ಮೈಬಣ್ಣ, ದಪ್ಪನೆಯ ಮೈಕಟ್ಟು, ದುಂಡು ಮುಖ ಹೊಂದಿದ್ದಾನೆ. ಎಡಗಾಲಿನ ಹಿಂಬಡದಲ್ಲಿ ಗಾಯದ ಕಲೆಯ ಗುರುತು ಹೊಂದಿದ್ದಾನೆ. ಬಾಲಕನ ಬುದ್ದಿಮಟ್ಟ ವಯಸ್ಸಿಗನುಗುಣವಾಗಿಲ್ಲ.  ಬಾಲಕನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸರಕಾರಿ ಬಾಲಕರ ಬಾಲಮಂದಿರ ಕೊಪ್ಪಳ ದೂರವಾಣಿ ಸಂಖ್ಯೆ : ೦೮೫೩೯-೨೦೦೭೫೫ ಮತ್ತು ೯೭೪೩೪೨೫೨೫೯ ಸಂಪರ್ಕಿಸುವಂತೆ ಕೊಪ್ಪಳದ ಸರಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.  
Please follow and like us:
error