fbpx

ರಾಜ್ಯದಲ್ಲಿರುವ ಪ್ರಾಥಮಿಕ ಶಾಲೆಗಳಲ್ಲಿ ಏಕರೂಪ ಶುಲ್ಕ ನಿತಿಯನ್ನು ಶೀಘ್ರದಲ್ಲೆ ಜಾರಿಗೋಳಿಸಬೇಕು

ಕೊಪ್ಪಳ: ಕನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕೊಪ್ಪಳ ತಾಲುಕಾ ಘಟಕವು ಮಹಾತ್ಮಗಾಂಧಿ ವೃತ್ತದಿಂದ ತಹಶಿಲ್ದಾರ ಮುಖಾಂತರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ  ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು. 
 ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಸಂಚಾಲಕರಾದ ಬಿ. ಗಿರೀಶಾನಂದ ಜ್ಞಾನಸುಂದರ ಮಾತನಾಡಿ  ಕಳೆದ ೫ ವರ್ಷಗಳಿಂದ ರಾಜ್ಯದಲ್ಲಿರುವ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಗೂ ಪಾಲಕರ ಹಿತ ಕಾಯುವ ಸಲುವಾಗಿ ಏಕರೂಪ ಶುಲ್ಕ ನೀತಿಯನ್ನು ಜಾರಿ ಮಾಡುವಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯವಹಿಸಿರುವುದನ್ನು ಕರವೇ ಕೊಪ್ಪಳ ತಾಲೂಕ ಘಟಕ ಬಲವಾಗಿ ಕಂಡಿಸುತ್ತದೆ. ನ್ಯಾಯಮೂರ್ತಿ ನಾಗಮೋಹನದಾಸರವರು ಏಕರೂಪ ಶುಲ್ಕ ವ್ಯವಸ್ಥೆ ಜಾರಿ ಮಾಡಬೇಕೆಂದು ಆದೇಶ ನಿಡಿ ವರ್ಷಗಳೆ ಕಳೆದರು ಸಹ ನೀತಿಯನ್ನು ಜಾರಿ ಮಾಡುವಲ್ಲಿ ಶಿಕ್ಷಣ ಸಚಿವರು ಅಸಡ್ಯ ತೋರುತ್ತಿರುವುದನ್ನು ನೋಡಿದರೆ, ರಾಜ್ಯಸರಕಾರಕ್ಕೆ ಕಾನುನಿನಬಗ್ಗೆ ಇರುವ ಗೌರವವನ್ನು ಎತ್ತಿ ತೋರಿಸುತ್ತದೆ. ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ ಪ.ಜಾತಿ ಮತ್ತು ಪ. ಪಂಗಡ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಹಾಗೂ ಇತರರಿಗೆ ೫ ಸಾವಿರ ರೂ. ಮೀರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಆದರೆ ಯಾವೊಂದು ಖಾಸಗಿ ಶಾಲೆಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ. ಕಳೇದ ೬ ತಿಂಗಳ ಹಿಂದೆ ಏಕ ರೂಪ ಶುಲ್ಕ ಕರುಡು ನಿಯಮಕ್ಕೆ ಆಕ್ಷೇಪಣೆ ಕರೆದಿದ್ದ ಸರಕಾರ, ಇವತ್ತಿನವರೆಗೂ ಕೂಡಾ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇರುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಣ ಇಲಖೆಯ ಈ ದಿವ್ಯ ನಿರ್ಲಕ್ಷದಿಂದ ನಗರ ಪ್ರದೇಶದಲ್ಲಿರುವ ಪಾಲಕರು ಲಕ್ಷ ಗಟ್ಟಲೇ ರೂ ಶುಲ್ಕವನ್ನು ಭರಿಸುವ ಸ್ಥಿತಿ ಎದುರಾಗಿದೆ. ರಾಜ್ಯದ ಜನರ ಹಿತ ಕಾಯಬೇಕಾದ ಸರಕಾರ ಕೇವಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಕೈಗೊಂಬೆಯಾಗಿ ವರ್ತಿಸುತ್ತಿರುವುದನ್ನು ಕರವೇ ವಿರೋಧಿಸುತ್ತದೆ. ನಗರ ಪ್ರದೇಶದಲ್ಲಿರುವ ಖಾಸಗಿ ಶಾಲಾಡಳಿತ ಮಂಡಳಿಗಳು ಪಾಲಕರ ಜೇಬಿಗೆ ಹಾಕುವ ಕತ್ತರಿಯನ್ನು ಈ ಕೂಡಲೇ ನಿಲ್ಲಿಸಬೇಕು. ಹಾಗೂ ರಾಜ್ಯ ಸರಕಾರ ಶಿಕ್ಷಣ ವ್ಯವಸ್ಥೆಯಲ್ಲಿ ತಮಿಳುನಾಡು ಮಾದರಿಯಲ್ಲಿ ಪ್ರತ್ಯೇಕ ಕಾನೂನು ರಚಿಸಬೇಕು. ಅಥವಾ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿತಂದು ಏಕರೂಪ ಶುಲ್ಕ ನೀತಿಯನ್ನು ಜಾರಿಗೊಳಿಸಬೇಕು. ಹಾಗೂ ಸರಕಾರದ ನಿಯಮವನ್ನು ಉಲ್ಲಂಘಿಸುವ ಶಾಲಾಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕರವೇ ಪಾಲಕರೊಡಗೂಡಿ ಹಾಗೂ ವಿದ್ಯಾರ್ಥಿಗಳೊಡಗೂಡಿ ಬೀದಿಗಿಳಿದು ಜಿಲ್ಲೆಯಾದ್ಯಂತ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಪ್ರತಿಭಟನೆಯಲ್ಲಿ ಕೊಪ್ಪಳ ತಾಲೂಕ ಅಧ್ಯಕ್ಷ ಹನಮಂತ ಬೆಸ್ತರ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ ಬ್ಯಾಹಟ್ಟಿ, ನಗರಾಧಕ್ಷ ಗವಿಸಿದ್ದಪ್ಪ ಹಂಡಿ, ಕಾರ್ಯಕರ್ತರಾದ ಮಂಜುನಾಥ ಯಲಬುರ್ಗಿ, ಬಸವರಾಜ ದೇಸಾಯಿ, ಶಶಿ ಬಿಡನಾಳ, ಮಂಜುಸ್ವಾಮಿ, ಗವಿಸಿದ್ದಪ್ಪ, ಮಂಜು ಸೋಮವಾರದ, ಮಂಜುನಾಥ ಗದುಗಿನ, ಬಸವರಾಜ ಜಮೇದಾರ ಮುಂತಾದವರು ಉಪಸ್ಥಿತರಿದ್ದರೆಂದು ಪ್ರಕಟಣೆಗೆ ಜಿಲ್ಲಾ ಸಂಚಾಲಕರಾದ ಬಿ. ಗಿರೀಶಾನಂದ ಜ್ಞಾನಸುಂದರ ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!