ಇಹ ಮತ್ತು ಪರದಲ್ಲಿ ಹಿತವಾದದ್ದೇ ಧರ್ಮ.

ಕೊಪ್ಪಳ-18-  ಈ ಲೋಕ ಮತ್ತು ಪರಲೋಕಗಳಲ್ಲಿ ಮನುಷ್ಯನಿಗೆ ಹಿತವಾದದ್ದು ಯಾವುದೆಂದರೆ ಅದು ಧರ್ಮ ಸಾಧನೆ ಮಾತ್ರ ಎಂದು ದದೇಗಲ್ಲ ಸಿದ್ದಾರೋಢಮಠದ ಆತ್ಮಾನಂಧ ಭಾರತಿ ಸ್ವಾಮಿಗಳು ಭಾಗ್ಯನಗರ ಗ್ರಾಮದ ಸದಾನಂದ ಜ್ಞಾನಯೋಗಾಶ್ರಮದಲ್ಲಿ ಸದಾನಂದ ಸ್ವಾಮಿಗಳ ೩ ನೇಯ ಮತ್ತು ಲಕ್ಷ್ಮಣಪ್ಪನವರು ದೇವರಕೊಳ್ಳದ ಇವರ ೧೫ ನೇಯ ಪುಣ್ಯರಾಧನೆಯ ನಿಮಿತ್ತ ಸೆ. ೧೨ ಮತ್ತು ೧೩ ಎರಡು ದಿನ ಏರ್ಪಡಿಸಿದ ಸತ್ಸಂಗಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಧರ್ಮಎಂದರೆ ಈ ಎವನ್ನು ಧರಿಸಿದ ಚೈತನ್ಯ ಅದರಲ್ಲಿ ರತನಾಗುವದೆಂದರೆ ನಿರಂತರ ಆಧ್ಯತ್ಮಿಕ ಚಿಂತನೆಯಲ್ಲಿ ತೊಡಗುವದು. ಅದರಿಂದ ನಾವು ಈ ಲೋಕದಲ್ಲಿಯೂ ನೆಮ್ಮದಿಯಿಂದ ಬಾಳುತ್ತೇವೆ. ಪರಲೋಕದಲ್ಲಿಯೂ ನಮಗೆ ಯೋಗ್ಯವಾದ ಸ್ಥಾನವಿರುತ್ತದೆ ಎಂದರು. ಸಾನಿದ್ಯವಹಿಸಿದ್ದ ಕೊಪ್ಪಳದ ರಾಮಕ್ರಷ್ಣ ವಿವೇಕಾನಂದ ಮಠದ ಚೈನನ್ಯಾನಂಧ ಸ್ವಾಮಿಗಳು ಮನುಷ್ಯ ಪಶುಪಕ್ಷಿ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅವುಗಳು ನಿಸರ್ಗಕ್ಕೆ ತಕ್ಕಂತೆ ವರ್ತಿಸಿದರೆ ಹಿತ ಮತ್ತು ಅಹಿತದ ಜ್ಞಾನವುಳ್ಳ ಇವನಷ್ಟು ಕೆಟ್ಟ ಪ್ರಾಣಿಗಳು ಇಲ್ಲವೇ ಇಲ್ಲ. ದೇಹ ಶಾಶ್ವತವಲ್ಲ ಎಂದು ತಿಳಿದು ಧರ್ಮಸಾಧನೆಯಲ್ಲಿ ತೊಡಗಬೇಕೆಂದರು.
    ಸುದ್ದಿಮೂಲ ಪತ್ರಿಕೆ ಸಂಪಾದಕ ಬಸವರಾಜ ಸ್ವಾಮಿ ಅತಿಥಿಯಾಗಿ ಭಾಗವಹಿಸಿ ತನ್ನಲ್ಲಿ ಇರುವ ಅರಿವನ್ನು ಕಡೆಗಣಿಸಿ ಮನುಷ್ಯ ಪುಸ್ತಕ ತೀರ್ಥಯಾತ್ರೆ, ಬೇರೆ ಬೇರೆ ಧರ್ಮ ಮತ್ತು ಮಹಾಪುರುಷರಲ್ಲಿ ಆ ಅರಿವನ್ನು ಹುಡುಕುತ್ತ ದಾರಿತಪ್ಪಿದ್ದಾನೆ.. ತನ್ನಲ್ಲಿರುವದನ್ನು ಅವನು ಅರಿತುಕೊಂಡರೆ ಇದಾವದೂ ಬೇಕಿಲ್ಲ ಎಂದು ಪ್ರತಿಪಾದಿಸಿದರು. ಅರಿವಿನಾಲಯದ ಚಂದ್ರಾಮಪ್ಪ ಮಾಸ್ತರ ಕಣಗಾಲ, ಚನ್ನಬಸವಸ್ವಾಮಿ, ಗಂಗಾಮಾತೆ, ವೀರಣ್ಣ ಹುರಕಡ್ಲಿ, ಎಚ್.ಎಲ್. ಹಿರೇಗೌಡ್ರ, ಮುದೇನಗೌಡ್ರ ಹ್ಯಾಟಿ, ಶಿವಲಿಂಗಪ್ಪ ಗುದಮದರಗಿ, ಮಳಿಯಪ್ಪ ಮಾಸ್ತರ ಸುರೇಶ ಸುರ್ವೆ ಮುಂತಾದವರು ಮಾತನಾಡಿದರು.
    ರಾಮಚಂದ್ರಪ್ಪ ಉಪ್ಪಾರ ಕು. ಅಕ್ಷತಾ ಬಣ್ಣದ ಬಾವಿ, ಅನ್ನಪುರ್ಣ ಮನ್ನಾಪೂರ, ಲಚ್ಚಪ್ಪ ಹಳೇಪೇಟೆ ಇವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ವೀರಣ್ಣ ಸಂದ್ಯಾಲ ಮತ್ತು ವಿದ್ಯಾಸಾಗರ ಕುದರಿಮೋತಿ ಕಾರ್ಯಕ್ರಮ ನಿರ್ವಹಿಸಿದರು. ಜ್ಞಾನ ಯೋಗಾಶ್ರಮದ ಅಧ್ಯಕ್ಷರಾದ ವಿಠ್ಠಪ್ಪ ಗೊರಂಟ್ಲಿ ವಂದಿಸಿದಿಸರು.
Please follow and like us:
error