fbpx

ಇಂಧನ ಖಾತೆ ಸಚಿವ ಡಿಕೆಶಿಯನ್ನು ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಒತ್ತಾಯ

               ಕುಷ್ಟಗಿ: ಖಾಸಗಿ ವಾಹಿನಿ ಪರ್ತಕರ್ತೆ ಹಾಗೂ ಕ್ಯಾಮರಾಮ್ಯಾನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಇಂಧನ ಖಾತೆ               ಸಚಿವ ಡಿ.ಕೆ ಶಿವುಕುಮಾರ ಹಾಗೂ ಈ ಪ್ರಕರಣಕ್ಕೆ ಪುಷ್ಠಿ ನೀಡಿದ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕದ ಅಧ್ಯಕ್ಷ ಬಸವರಾಜ ಪಲ್ಲೇದ ನೇತೃತ್ವದಲ್ಲಿ ಸ್ಥಳೀಯ ಗ್ರೇಡ್ ೨ ತಹಶೀಲ್ದಾರ ವೇದವ್ಯಾಸ ಮುತಲಿಕ್ ಅವರಿಗೆ ಮನವಿ ಪತ್ರಸಲ್ಲಿಸಿದರು.
               ಇತ್ತೀಚೆಗೆ ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಸತತವಾಗಿ ಹೋರಾಡುತ್ತಿರುವ ಪತ್ರಿಕೋದ್ಯಮ ಹಾಗೂ ಮಾದ್ಯಮದವರ ಸೇವೆ ನಿರಂತರವಾಗಿದ್ದು ಅದರಂತೆ ಟಿ.ವಿ೯ ಮಾದ್ಯಮದವರು ಭ್ರಷ್ಟಾಚಾರವನ್ನು ತಡೆಗಟ್ಟುವ ಕಾರ್ಯದಲ್ಲಿ ರಾಜ್ಯ ಸಚಿವ ಸಂಪುಟದ ಇಂಧನ ಖಾತೆ ಸಚಿವರಾದ ಡಿ.ಕೆ ಶಿವಕುಮಾರ ಬಣ್ಣ ಬಯಲಿಗೆಳೆಯಲು ಹೋದ ಪ್ರಮುಖ ಖಾಸಗಿ ಮಾದ್ಯಮದ(ಟಿವಿ೯) ಕ್ಯಾಮೆರಾಮನ್, ಹಾಗೂ ಮಹಿಳಾ ಪತ್ರಕರ್ತೆ ಮೇಲೆ ಸಚಿವರ ಹಿಂಬಾಲಕರು ಹಾಗೂ ಸಹಚರರು ಅಮಾನವೀಯ ರೀತಿಯಲ್ಲಿ ಕೃತ್ಯವನ್ನು ಎಸಗಿ ಹಲ್ಲೆಯನ್ನು ಮಾಡಿ ಅವಮಾನ ಮಾಡಿದ್ದಲ್ಲದೇ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ತಮ್ಮದೇನು ತಪ್ಪಿಲ್ಲ ಎನ್ನುವ ರೀತಿಯಲ್ಲಿ ಮಾದ್ಯಮದವರನ್ನು ತುಚ್ಛವಾಗಿ ಕಂಡಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾದ್ಯಮವು ಹಗಲು ಇರುಳೆನ್ನದೇ ನಿರಂತರವಾಗಿ ತಮ್ಮ ಸೇವೆಯನ್ನು ನಿಸ್ವಾರ್ಥತೆಯಿಂದ ಮಾಡುತ್ತಿರುವಾಗ ಒಬ್ಬ ಜವಾಬ್ದಾರಿಯುತ ಸಚಿವ ಮಾದ್ಯಮದವರ ಮೇಲೆ ಗೂಂಡಾ ಪ್ರವೃತ್ತಿ ತೋರಿರುವುದು ಎಷ್ಟು ಸೂಕ್ತ? ತಮ್ಮ ಸಚಿವ ಸಂಪುಟದಲ್ಲಿರುವ ಡಿಕೆಶಿ ಒಬ್ಬ ಕ್ರಿಮಿನಲ್ ಆಗಿದ್ದು ಇವರ ಮೇಲೆ ಸಾಕಷ್ಟು ಕ್ರಿಮಿನಲ್ ಮೊಕದ್ದಮೆಗಳು, ಡಿನೋಟಿಫಿಕೇಶನ್, ಅಕ್ರಮ ಆಸ್ತಿ ಸಂಪಾದನೆ, ಅಕ್ರಮ ಗಣಿಗಾರಿಕೆ ಸೇರಿದಂತೆ ಅಂಡರವರ್ಡ ಲಿಂಕ್‌ನ್ನು ಹೊಂದಿರುವ ಡಿಕೆಶಿಗೆ ತಾವು ಸಚಿವ ಸ್ಥಾನ ನೀಡಿರುವುದು ತುಂಬಾ ಕರ್ನಾಟಕ ಜನತೆಯ ದುರದೃಷ್ಟಕರವಾಗಿದ್ದು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಮತ್ತು ಅವರ ಗುಲಾಮರಂತೆ ವರ್ತಿಸಿದ ಪೊಲೀಸ್‌ರನ್ನು ವಜಾಗೊಳಿಸಿ ತಕ್ಷಣವೇ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರದ ಮೂಲಕ ಸರಕಾರಕ್ಕೆ ಎಚ್ಚರಿಸಿದ್ದೇವೆ. ಈ ಸಂದರ್ಭದಲ್ಲಿ ಕಾರ್ಯನಿರತ ಪರ್ತಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವಿ.ಆರ್ ತಾಳಿಕೋಟಿ, ತಾಲೂಕು ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ, ಕಾರ್ಯದರ್ಶಿ ಸಂಗಮೇಶ ಸಿಂಗಾಡಿ, ಸಹ ಕಾರ್ಯದರ್ಶಿ ಅನೀಲಕುಮಾರ ಕಮ್ಮಾರ, ಸಂಘಟನಾ ಕಾರ್ಯದರ್ಶಿ ಶಿವರಾಜ ಬಂಡಿಹಾಳ, ಖಂಜಾಚಿ ಶ್ರೀಕಾಂತ ಸರಗಣಾಚಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್. ಶಾಮೀದಸಾಬ, ಪವಾಡೆಪ್ಪ ಚೌಡ್ಕಿ, ವಿಶ್ವನಾಥ, ಬಸವರಾಜ ಗಾಣಗೇರ, ಏಕನಾಥ ಮೇದಿಕೇರಿ, ಖಾಜಾವಲಿ ಇನ್ನಿತರರು ಉಪಸ್ಥಿತರಿದ್ದರು.
  
Please follow and like us:
error

Leave a Reply

error: Content is protected !!