fbpx

ಪಿಯುಸಿ ಇಂಗ್ಲೀಷ್ ಪರೀಕ್ಷೆ : ೮೪೧೦ ವಿದ್ಯಾರ್ಥಿಗಳು ಹಾಜರು

ಕೊಪ್ಪಳ ಮಾ. ೨೬  ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗುರುವಾರದಂದು ನಡೆದ ಇಂಗ್ಲೀಷ್ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ ೮೪೧೦ ವಿದ್ಯಾರ್ಥಿಗಳು ಹಾಜರಾಗಿದ್ದು, ೪೭೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ.
  ಪಿಯುಸಿ ಪರೀಕ್ಷೆಯ ಇಂಗ್ಲೀಷ್ ವಿಷಯ ಪರೀಕ್ಷೆ ತೆಗೆದುಕೊಂಡಿರುವ ೮೮೮೨ ವಿದ್ಯಾರ್ಥಿಗಳ ಪೈಕಿ ೮೪೧೦ ವಿದ್ಯಾರ್ಥಿಗಳು ಹಾಜರಾಗಿದ್ದು, ೪೭೨ ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ೨೮೬೫ ವಿದ್ಯಾರ್ಥಿಗಳ ಪೈಕಿ ೨೭೪೦ ವಿದ್ಯಾರ್ಥಿಗಳು ಹಾಜರಾಗಿದ್ದು, ೧೨೫ ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೩೪೧೯ ವಿದ್ಯಾರ್ಥಿಗಳ ಪೈಕಿ ೩೨೬೫ ವಿದ್ಯಾರ್ಥಿಗಳು ಹಾಜರಿದ್ದು, ೧೫೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ ೧೩೧೯ ವಿದ್ಯಾರ್ಥಿಗಳ ಪೈಕಿ ೧೨೩೫ ಹಾಜರಿದ್ದು, ೮೪ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ೧೨೭೯ ವಿದ್ಯಾರ್ಥಿಗಳ ಪೈಕಿ ೧೧೭೦ ವಿದ್ಯಾರ್ಥಿಗಳು ಹಾಜರಾಗಿದ್ದು, ೧೦೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ  ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!