ಜಿಲ್ಲಾ ಉತ್ಸವ ಪುರಾಣಿಕರ ಪುತ್ಥಳಿಗೆ ಗೌರವಾರ್ಪಣೆ.

ಕೊಪ್ಪಳ,ಆ,೨೨ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಜರುಗಲಿರುವ ಜಿಲ್ಲಾ ಉತ್ಸವದ ಪ್ರಯುಕ್ತ ಶನಿವಾರ ನಗರದ ಕಾವ್ಯಾನಂದ ಉದ್ಯಾನವನದಲ್ಲಿರುವ ದಿ.ಡಾ.ಸಿದ್ದಯ್ಯ ಪುರಾಣಿಕ ರವರ ಪುತ್ಥಳಿಗೆ ಮಾಲಾರ್ಪಣೆಮಾಡಿ ಗೌರವಾರ್ಪಣೆ ಮಾಡುವುದರ ಮೂಲಕ ಜಿಲ್ಲಾ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
   ಈ ಸಂದರ್ಭದಲ್ಲಿ ಇಟಗಿಯಶ್ರೀಗಳು, ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್, ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೂರನೂರ್, ಹಿರಿಯ ಸಾಹಿತಿ ಡಾ.ಮಾಹಾಂತೇಶ ಮಲ್ಲನಗೌಡರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಶರಣಪ್ಪ ಲೇಬಗೇರಿ, ವೇದಿಕೆಯ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ, ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿ.ಹೆಚ್.ನಾರಿನಾಳ, ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಪತ್ರಕರ್ತ ಹರೀಶ್ ಹೆಚ್.ಎಸ್. ವೈ.ಬಿ,ಜೂಡಿ, ವೀರಣ್ಣ ಕಳ್ಳಿಮನಿ ಉಮಾ ಜನಾದ್ರಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Please follow and like us:
error