ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಂದ ಚರಂಡಿ ಕಾಮಗಾರಿಗೆ ಚಾಲನೆ

ಕೊಪ್ಪಳ. ಜ. ೧೯: ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಬಂಡಿ ಹಮಾಲರ ಕಾಲೋನಿಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಚರಂಡಿ ಕಾಮಗಾರಿಗೆ ಶನಿವಾರ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಭೂಮಿ ಪೂಜೆ ನೆರವೇರಿಸುವುದರೊಂದಿಗೆ ಕಾಮಗಾರಿಗೆ ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿದ ಬಳಿಕ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಮಾತನಾಡಿ, ಕಾಮಗಾರಿಗಳು ತೀವ್ರಗತಿಯಲ್ಲಿ ನಡೆಯಬೇಕು ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಹಾಗೂ ವಾರ್ಡ ಸದಸ್ಯರೂ ಆಗಿರುವ ಅಮ್ಜದ್ ಪಟೇಲ್ ಮಾತನಾಡಿ, ಈ ಕಾಲೋನಿಯ ಮೂಲಸೌಕರ್ಯಗಳಲ್ಲಿ ಒಂದಾಗಿದ್ದ ಚರಂಡಿ ಕಾಮಗಾರಿ ಯೋಜನೆ ಅನುಷ್ಠಾನಗೊಂಡಿರುವುದರಿಂದ ಈ ಭಾಗದ ನಾಗರಿಕರಿಗೆ ತುಂಬಾ ಅನುಕೂಲಕರವಾಗಲಿದೆ. 
ನಗರಸಭೆಯ ಯೋಜನೆಗಳಾದ ಸಾರ್ವಜನಿಕ ಶೌಚಾಲಯ, ವಿದ್ಯುತ್ ಪೂರೈಕೆ, ಒಳಚರಂಡಿ ಕಾಮಗಾರಿ, ಕುಡಿವ ನೀರಿನ ಬೋರ್‌ವೆಲ್, ರಸ್ತೆ ಮತ್ತಿತರ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು ನಾಗರಿಕರು ಇವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. 
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಅಫ್ಜಲ್ ಪಟೇಲ್, ಪಂಚ ಕಮೀಟಿ ಅಧ್ಯಕ್ಷ ಜಾಫರಸಾಬ್ ಗೊಂಡಬಾಳ, ಬಂಡಿ ಹಮಾಲರ ಕಾಲೋನಿ ಮಾಜಿ ಅಧ್ಯಕ್ಷ ಖಾದರಸಾಬ್ ಫಯ್ಯಮಾಸಿ, ಜೋಗಮ್ಮ ಬಾಗಲಿ, ಮೌಲಾಸಾಬ ಅಳವಂಡಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error