ನಗರಸಭಾ ಉಪಾಧ್ಯಕ್ಷರಿಂದ ಸಂತ್ರಸ್ತರಿಗೆ ಪರಿಹಾರ ವಿತರಣೆ

ಕೊಪ್ಪಳ. ಅ. ೮: ಇಲ್ಲಿನ ೨೦ನೇ ವಾರ್ಡ್‌ನ ಬಹಾರಪೇಟೆ ಓಣಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಮನೆಗೆ ಬೆಂಕಿ ಬಿದ್ದ ಪರಿಣಾಮ ಸುಮಾರು ೨ಲಕ್ಷ ರೂಗಳ ಹಾನಿ ಸಂಭವಿಸಿದೆ.
ಬಹಾರಪೇಟೆ ನಿವಾಸಿ ರಮೀಜಾಬಿ ಮಾಬುಸಾಬ್ ಗಾದಿವಾಲ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಗಾದಿ ತಯಾರಿಕೆಯ ಹತ್ತಿ ಬೆಂಕಿಗೆ ಆಹುತಿಯಾಗಿದ್ದು, ಸುಮಾರು ೨ಲಕ್ಷಕ್ಕೂ ಹೆಚ್ಚು ಮೌಲ್ಯದ ಹಾನಿ ಉಂಟಾಗಿದೆ.
ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ಬೆಂಕಿ ಅವಘಡ ಸ್ಥಳಕ್ಕೆ ನಗರಾಸಭಾ ಉಪಾಧ್ಯಕ್ಷ ಅಮ್ಜದ್ ಪಟೇಲ್ ಭೇಟಿ ನೀಡಿ, ಸಂತ್ರಸ್ತರಿಂದ ಬೆಂಕಿ ಅನಾಹುತದ ಮಾಹಿತಿ ಪಡೆದರು.
ನಂತರ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರವರು ಸಂತ್ರಸ್ತರಿಗೆ ತಮ್ಮ ವಯಕ್ತಿಕ ಪರಿಹಾರ ಧನವನ್ನು ನೀಡಿ, ಸಾಂತ್ವನ ಹೇಳಿದ ಅವರು, ಸರಕಾರದಿಂದ ಹಾಗೂ ನಗರಸಭೆಯಿಂದಲೂ ಸಂತ್ರಸ್ತರಿಗೆ ಇನ್ನಷ್ಟು ಪರಿಹಾರಧನ ವಿತರಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಶ್ರಯ ಕಮೀಟಿ ಮಾಜಿ ಸದಸ್ಯ ಜಹೀರ ಅಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಮೈಮೂದ್ ಹುಸೇನಿ, ಓಣಿಯ ಮುಖಂಡರಾದ ಶರೀಫ್ ಸಾಬ್, ಮರ್ದಾನಸಾಬ್ ಬೆಟಗೇರಿ, ಕಾಶಿಂಸಾಬ್ ಬಡಿಗೇರ, ಜಿಲಾನ್ ಕುದ್ರಿಮೋತಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error