ಕೊಪ್ಪಳ,
ಡಿ.೧೮ (ಕ ವಾ) ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಸೇನಾ ಭರ್ತಿ
ರ್ಯಾಲಿಯು ೨೦೧೬ ರ ಜ.೦೫ ರಿಂದ ೧೫ ರವರೆಗೆ ಬೀದರ್ನಲ್ಲಿ ನಡೆಯಲಿದ್ದು, ಆಸಕ್ತ
ಯುವಕರು ಈ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
ಬೆಂಗಳೂರಿನ
ನೇಮಕಾತಿ ವಲಯ ಹೆಡ್ಕ್ವಾರ್ಟರ್ಸ ಮತ್ತು ಬೆಳಗಾವಿಯ ಸೈನ್ಯ ನೇಮಕಾತಿ ಕಛೇರಿ ಇವರ
ವತಿಯಿಂದ ನಡೆಯಲಿರುವ ಈ ಸೇನಾಭರ್ತಿ ರ್ಯಾಲಿಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ,
ಬೀದರ್, ಗುಲಬರ್ಗಾ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪುರುಷ
ಅಭ್ಯರ್ಥಿಗಳನ್ನು ಸೇನೆಯ ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ತಾಂತ್ರಿಕ, ಸೈನಿಕ
ಲಿಪಿಕ/ಉಗ್ರಾಣ ಪಾಲಕ, ಸೈನಿಕ ಟ್ರೇಡ್ಸ್ಮನ್ ಹಾಗೂ ಸೈನಿಕ ಶುಶ್ರೂಷಾ ಸಹಾಯಕ
ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಅಲ್ಲದೇ ಮಾಜಿ ಸೈನಿಕರನ್ನು ಕೂಡ ಡಿ.ಎಸ್.ಸಿ ಮೂಲಕ
ಆಯ್ಕೆ ಮಾಡಿಕೊಳ್ಳಲಾಗುವುದು. ಎಲ್ಲ ಹುದ್ದೆಗಳಿಗೆ ೧೭ ೧/೨ ವರ್ಷದಿಂದ ೨೩
ವರ್ಷದೊಳಗಿನ ವಯೋಮಿತಿ ಹೊಂದಿರಬೇಕು (೦೫-ಜನೇವರಿ ೯೩ ರಿಂದ ೦೫ ಜುಲೈ ೯೮ ರೊಳಗೆ
ಜನಿಸಿದವರಾಗಿರಬೇಕು).
ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ ಪ್ರತಿ
ವಿಷಯದಲ್ಲಿ ಕನಿಷ್ಟ ಶೇ.೩೩% ಹಾಗೂ ಒಟ್ಟಾರೆ ಕನಿಷ್ಟ ಶೇ.೪೫% ಅಂಕಗಳೊಂದಿಗೆ
ಎಸ್ಎಸ್ಎಲ್ಸಿ ಪಾಸಾಗಿರಬೇಕು. ಸೈನಿಕ ತಾಂತ್ರಿಕ ಹುದ್ದೆಗೆ ೧೭ ೧/೨ ವರ್ಷದಿಂದ ೨೩

ಜನಿಸಿದವರಾಗಿರಬೇಕು), ಪಿಯುಸಿ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಿಕ, ಗಣಿತ ಹಾಗೂ
ಇಂಗ್ಲೀಷ್ನಲ್ಲಿ ಶೇ.೪೫% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಎಸ್.ಎಸ್.ಎಲ್.ಸಿ
ನಂತರದ ಎಂಜಿನಿಯರಿಂಗ್ ಇನ್ ಡಿಪ್ಲೋಮಾದಲ್ಲಿ ಶೇ.೫೦% ಅಂಕಗಳೊಂದಿಗೆ
ಉತ್ತೀರ್ಣರಾಗಿರಬೇಕು.
ಸೈನಿಕ ಲಿಪಿಕ/ಉಗ್ರಾಣ ಪಾಲಕ ಹುದ್ದೆಗಳಿಗೆ
ಪಿಯುಸಿ/೧೦+೨/ಇಂಟರ್ ಮೀಡಿಯೇಟ್ನಲ್ಲಿ ಶೇ.೫೦ ಸರಾಸರಿಯೊಂದಿಗೆ ಹಾಗೂ ಪ್ರತಿಯೊಂದು
ವಿಷಯದಲ್ಲಿ ಕನಿಷ್ಟ ಶೇ.೪೦% ನೊಂದಿಗೆ ಪಾಸಾಗಿರಬೇಕು. ಅಭ್ಯರ್ಥಿಯು ಕಡ್ಡಾಯವಾಗಿ
ಇಂಗ್ಲೀಷ್, ಗಣಿತ, ಎಸ್ಎಸ್ಎಲ್ಸಿ ಅಥವಾ ಪಿಯುಸಿಯಲ್ಲಿ ಕಲಿತಿರಬೇಕು ಹಾಗೂ ಶೇ.೪೦%
ರಷ್ಟು ಅಂಕಗಳನ್ನು ಪ್ರತಿಯೊಂದು ವಿಷಯದಲ್ಲಿ ಪಡೆದಿರಬೇಕು.
ಸೈನಿಕ
ಟ್ರೇಡ್ಸ್ಮನ್ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಯನ್ನು ಕನಿಷ್ಠ ಶೇ.೩೩ ರಷ್ಟು
ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಸೈನಿಕ ಶುಶ್ರೂಷಾ ಸಹಾಯಕ ಹುದ್ದೆಗಳಿಗೆ ಅರ್ಜಿ
ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ೧೭ ೧/೨ ವರ್ಷದಿಂದ ೨೩ ವರ್ಷದೊಳಗಿನ ವಯೋಮಿತಿ
ಹೊಂದಿರಬೇಕು (೦೫-ಜನೇವರಿ ೯೩ ರಿಂದ ೦೫ ಜುಲೈ ೯೮ ರೊಳಗೆ ಜನಿಸಿದವರಾಗಿರಬೇಕು), ಪಿಯುಸಿ
ಅಥವಾ ತತ್ಸಮಾನ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಹಾಗೂ
ಇಂಗ್ಲೀಷ್ನೊಂದಿಗೆ ಸರಾಸರಿ ಶೇ.೫೦% ಪ್ರತಿಯೊಂದು ವಿಷಯದಲ್ಲಿ ಶೇ.೪೦% ಪಡೆದಿರಬೇಕು,
ಅಥವಾ ಬಿ.ಎಸ್.ಸಿ (ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಜೈವಿಕಶಾಸ್ತ್ರ) ಪದವಿ ಹಾಗೂ
ಇಂಗ್ಲೀಷ (ಪಾಸಾಗಿದ್ದರೆ ಸಾಕು) ೧೦+೨ ಮಟ್ಟದಲ್ಲಿನ ಅಂಕಗಳ ಷರತ್ತುಗಳು
ಅನ್ವಯಿಸುವುದಿಲ್ಲ. ಆದರೆ ಮೇಲೆ ತಿಳಸಿದ ನಾಲ್ಕು ವಿಷಯಗಳನ್ನು ೧೦+೨/ಪಿಯುಸಿ
ಮಟ್ಟದಲ್ಲಿ ಕಲಿತಿರಬೇಕು.
ಆನ್ಲೈನ್ ಮೂಲಕ ಅರ್ಜಿಗಳನ್ನು ವೆಬ್ಸೈಟ್

www.joinindianarmy.nic.in ಮೂಲಕ
ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ ನೋಂದಣಿ ಮಾಡಿಕೊಳ್ಳುವಾಗ
ಸಮಸ್ಯೆಗಳು ಕಂಡುಬಂದಲ್ಲಿ

è www.joinindianarmy@gov.in ಗೆ ಇ-ಮೇಲ್ ಮಾಡಿ
ಪರಿಹರಿಸಿಕೊಳ್ಳಬಹುದಾಗಿದೆ. ರ್ಯಾಲಿ ನಡೆಯುವ ಸ್ಥಳದಲ್ಲಿ ಯಾವುದೇ ತರಹದ
ಮೊಬೈಲ್ನ್ನು ಅಭ್ಯರ್ಥಿಗಳು ತರಬಾರದು. ದೈಹಿಕದಾರ್ಢ್ಯತೆ ಪರೀಕ್ಷೆಯನ್ನು
ಅಭ್ಯರ್ಥಿಗಳು ತಮ್ಮ ಹೊಣೆಯ ಮೇಲೆ ನಿಭಾಯಿಸಿಕೊಳ್ಳಬೇಕು, ದೈಹಿಕ ಶಕ್ತಿಯನ್ನು
ಹೆಚ್ಚಿಸುವಂತಹ ಉದ್ದೀಪನ ಮದ್ದುಗಳನ್ನು ಬಳಸುತ್ತಿಲ್ಲವೆಂದು ಖಚಿತ ಪಡಿಸಿಕೊಳ್ಳಲು
ಭರ್ತಿ ಸಮಯದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು.
ಮಧ್ಯವರ್ತಿಗಳ
ಬಗ್ಗೆ ಎಚ್ಚರ : ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ.
ಮಧ್ಯವರ್ತಿಗಳ ಹಾವಳಿ ಬಗ್ಗೆ ಎಚ್ಚರ ವಹಿಸಬೇಕು. ವದಂತಿಗಳಿಗೆ ಕಿವಿಗೊಡಬಾರದು.
ದೈಹಿಕ, ಲಿಖಿತ ಅಥವಾ ವೈದ್ಯಕೀಯ ಪರೀಕ್ಷೆಗಳಲ್ಲಿ ನಿಮಗೆ ಯಾರು ಸಹಾಯ ಮಾಡಲಾರರು.
ಒಂದು ವೇಳೆ ಯಾವುದೇ ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ಸಂಪರ್ಕಿಸಲು
ಪ್ರಯತ್ನಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ಅಭ್ಯರ್ಥಿಗಳ ಸ್ವಂತ
ಅರ್ಹತೆ ಹಾಗೂ ಕ್ಷಮತೆಯೇ ಅವರನ್ನು ಆಯ್ಕೆ ಮಾಡಲು ಸಹಕಾರಿಯಾಗುವುದು.
ಈ
ಕುರಿತು ಹೆಚ್ಚಿನ ಮಾಹಿತಿಗಾಗಿ ಸೈನಿಕ ನೇಮಕಾತಿ ಕಛೇರಿ, ಬೆಳಗಾವಿ ದೂರವಾಣಿ ಸಂಖ್ಯೆ:
೦೮೩೧-೨೪೬೫೫೫೦ ಹಾಗೂ ಐವಿಆರ್ಎಸ್ ದೂರವಾಣಿ ಸಂಖ್ಯೆ ೦೮೦-೨೫೫೯೯೨೯೦ ನ್ನು
ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Please follow and like us: