ಜುಲೈ ೧೯ರಂದು ಕಲೆ ಮತ್ತು ಜೀವನ ಮೌಲ್ಯ ಸಂವಾದ ಕಾರ್ಯಕ್ರಮ.

ಕೊಪ್ಪಳ: ಸಂಸ್ಕಾರ ಭಾರತಿ ಕರ್ನಾಟಕ ಪ್ರಾಂತ  ಇವರ ಸಹಯೋಗದಲ್ಲಿ ಇದೇ ದಿನಾಂಕ ೧೮ ರಂದು  ಶ್ರೀರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ  ಕರ್ನಾಟಕ ಪ್ರಾಂತ ಸಭೆ,   ೧೯ ರಂದು ಸಂಜೆ ೪-೩೦ಕ್ಕೆ   ನಗರದ ಸಾಹಿತ್ಯಭವನದಲ್ಲಿ ಕಲೆ ಮತ್ತು ಜೀವನ ಮೌಲ್ಯಗಳು ಕುರಿತು ಸಾರ್ವಜನಿಕ ಕಲಾ ಸಂವಾದ ಕಾರ್ಯಕ್ರಮಗಳು ಜರುಗುವವು.
   ಕಲಾ ಸಂವಾದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀಚೈತನ್ಯಾನಂದ ಸ್ವಾಮಿಜಿ ವಹಿಸುವರು, ಸಂಸ್ಕಾರ ಭಾರತಿಯ ಬಾಬಾ ಯೋಗೇಂದ್ರಜಿ ಉಪಸ್ಥಿತರಿರುವರು, ಆನೆಗುಂದಿ ಸಂಸ್ಥಾನದ ರಾಜಾ ಕೃಷ್ಣದೇವರಾಯ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು, ಖ್ಯಾತ ಚಲನಚಿತ್ರ ನಿರ್ದೇಶಕ , ನಟ ಟಿ.ಎಸ್.ನಾಗಾಭರಣ ಕಾರ್ಯಕ್ರಮ ಉದ್ಘಾಟಿಸುವರು.
   ಕಾರ್ಯಕ್ರಮದಲ್ಲಿ ಖ್ಯಾತ ಚಲಚಚಿತ್ರ ನಟಿ ಶ್ರೀಮತಿ ಮಾಳವಿಕಾ ಅವಿನಾಶ,  ಶಿಲ್ಪಿ ಜಿ.ಎಲ್.ಭಟ್, ರಂಗ ನಿರ್ದೇಶಕ ಡಾ.ಬಿವಿರಾಜಾರಾಮ್,  ಚಿತ್ರಕಲಾವಿದರುಗಳಾದ  ಚಿ.ಸು.ಕೃಷ್ಣಶೆಟ್ಟಿ, ಬಿ,ಮಾರುತಿ, ಶಿಲ್ಪ ಕಲಾವಿದ ಉಪಾಧ್ಯ  ಮೈಸೂರಿನ ವಿದೂಶಿ, ನೃತ್ಯ ಕಲಾವಿದೆ ಶ್ರೀಮತಿ ಕೃಪಾ ಫಡಕೆ ಮುಂತಾದವರುಗಳು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕಿನ್ನಾಳ ಕಲಾವಿದ ನಾರಾಯಣಪ್ಪ ಚಿತ್ರಗಾರ ಮತ್ತು ಜನಪದ ಕಲಾವಿದ ವೀರಣ್ಣ ಬೆಳಗಲ್ ರವರುಗಳಿಗೆ ಸನ್ಮಾನಿಸಲಾಗುವುದೆಂದು ಸಂಸ್ಕಾರ ಭಾರತಿ ಕ್ಷೇತ್ರ ಪ್ರಮುಖ ಡಾ.ಕೆ.ಜಿ.ಕುಲಕರ್ಣಿ, ಸಂಯೋಜಕ ವಾದಿರಾಜ್ ಪಾಟೀಲ್ ತಿಳಿಸಿದ್ದಾರೆ.
Please follow and like us:
error

Related posts

Leave a Comment