ಗಜಲ್ -ರಮೇಶ ಗಬ್ಬೂರು ಗಂಗಾವತಿ

ಎಳು ಗೆಳತಿ ರಂಜಾನಿನ ಸೂರ್ಯ ಕರೆಯುತ್ತಿದ್ದಾನೆ. ನಿನ್ನವನಿಗಾಗಿ ದುವಾ ಕೇಳಲು…..
ಎಲ್ಲಾ ತ್ಯಾಗ ಬಲಿದಾನಗಳ ನೆನೆದು ಮನಸ ಗೌರವಿಸುವ ಮೊಹಬ್ಬತ್ತಿನ ದುವಾ ಕೇಳಲು.

ಪಾದದ ಧೂಳನು ಪವಿತ್ರ ಎಂದು ಮುಟ್ಟಿ ಶುಕ್ರ ಹೇಳುವ ಸಲಾಮು ಅವನಿಗೆ ಬೇಕಿಲ್ಲ…..
ದೇಹ ಸಾಯಿಸುವ ಮಾತು ಬಿಟ್ಟು ಬಾ ಮನದ ದರ್ದ ಸಾಯಿಸುವ ದುವಾ ಕೇಳಲು. .

ದುಡಿಯದೆ ಪ್ರಾರ್ಥನೆಗಳ ಮಾಡುತ್ತಾ ಮೈಬಾಗಿಸುವ ಕಸರತ್ತಿನ ಆಟ ಅವನಿಗೆ ಬೇಕಿಲ್ಲ. 
ಮನದ ಪರದೆಯ ಹರಿದು ಬಾ ಅವನಿಗಾಗಿ ಮನಬಾಗಿಸುವ ಸುಭಾದ ದುವಾ ಕೇಳಲು. ..

ನೀ ರೋಜಾ ಬಿಡುವವರೆಗೆ ನೆರಳು ಹರಡಿದ ಅವನ ಬಗೆಗೆ ನೀನೇನು ಹೇಳಬೇಕಿಲ್ಲ. …
ಜಿಹಾದಿನ ತಪ್ಪು ಅರ್ಥವ ಸಾಯಿಸಿ ಬಾ ಬಲಿಯಾಗುವ ನಿನ್ನವನಿಗಾಗಿ ದುವಾ ಕೇಳಲು.

ನಿನಗಾಗಿ ಚಂದ್ರ ಕಾಣಲೆಂದು ಮೋಡಗಳ ಬೈಯುತ್ತ ಮೈ ತೋಯಿಸಿಕೊಂಡವಗೆ ಸಲಾಮು ಬೇಕಿಲ್ಲ….
ನೀನೊಮ್ಮೆ ಚಾಂದ ರಾತ್ರಿಯ ಬೆಳಕಾಗಿ ಬಾ ಬೆಂದವರ ಬದುಕಿನ  ದುವಾ ಕೇಳಲು. .

ಶಹರಿಯ ತಂಗಾಳಿಯಲಿ ನಿನ ನಮಾಜು ನೋಡುತ್ತಾ ನಿಲ್ಲುವುದು ಅವನಿಗೆ  ಹೊಸತಲ್ಲ. …
ಕತ್ತಲ ರಾತ್ರಿಯಲ್ಲಿಯೂ ಹಣೆ ಹಚ್ಚಿ ಬಾ ಅವನ ಮಗ ‘ದಾಸ’ನಿಗಾಗಿ ದುವಾ ಕೇಳಲು. ..

ರಮೇಶ ಗಬ್ಬೂರು ಗಂಗಾವತಿ
ಮೊ..9844433128

Related posts

Leave a Comment