ರಾಷ್ಟ್ರೀಯ ಯುವ ಪ್ರಶಸ್ತಿ ಪ್ರಸ್ತಾವನೆ ಆಹ್ವಾನ.

ಕೊಪ್ಪಳ ಆ. ೦೭ ಭಾರತ ಸರ್ಕಾರವು ೨೦೧೪-೧೫ನೇ ಸಾಲಿಗೆ ರಾಷ್ಟ್ರೀಯ ಯುವ ಪ್ರಶಸ್ತಿಗಳಿಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ೨೦೧೪-೧೫ ನೇ ಸಾಲಿನಲ್ಲಿ ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ದಿ ಮತ್ತು ಸಮಾಜ
ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ೧೫ ರಿಂದ ೨೯ ವರ್ಷದ ವಯೋಮಿತಿಯೊಳಗಿನ ಯುವಕ ಅಥವಾ
ಯುವತಿಯರನ್ನು ಒಳಗೊಂಡ ಯುವಕ ಮತ್ತು ಯುವತಿ ಸಂಘಗಳು ಪ್ರಶಸ್ತಿಗಾಗಿ ಜಿಲ್ಲೆಯಿಂದ ಒಂದು
ವೈಯಕ್ತಿಕ ಮತ್ತು ಒಂದು ಸಾಂಘಿಕ ಪ್ರಸ್ತಾವನೆಗಳನ್ನು  ಸಲ್ಲಿಸಬಹುದಾಗಿದೆ.  ಈ
ಸಂಬಂಧವಾದ ನಿಗದಿತ ಅರ್ಜಿ ನಮೂನೆಗಳು ಮತ್ತು ವಿವರಗಳು ವೆಬ್‌ಸೈಟ್ ವಿಳಾಸ.
www.karnatakayouthportal.in ನಲ್ಲಿ
ಲಭ್ಯವಿದ್ದು. ಆನ್‌ಲೆನ್ನಲ್ಲಿ ಅರ್ಜಿ ಭರ್ತಿ ಮಾಡಿ ಆಗಸ್ಟ್ ೨೦ ಒಳಗೆ
ಸಲ್ಲಿಸಬಹುದಾಗಿದೆ. ಇಲ್ಲವೇ ಲಿಖಿತ ಅರ್ಜಿಗಳನ್ನು ಭರ್ತಿ ಮಾಡಿ ಆಗಸ್ಟ್ ೨೦ ಒಳಗಾಗಿ
ನಿರ್ದೇಶಕರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :೦೮೫೩೯-೨೦೧೪೦೦ ಕ್ಕೆ ಸಂಪರ್ಕಿಸಬಹುದು. ಎಂದು
ಸಹಾಯಕ ನಿರ್ದೇಶಕರಾದ ಶಾರದಾ ನಿಂಬರಗಿ ಅವರು ತಿಳಿಸಿದ್ದಾರೆ.
Please follow and like us:
error