ಜನರಲ್ ಚಾಂಪಿಯನ್ಸಗಳಾಗಿ ಆಯ್ಕೆ.

ಕೊಪ್ಪಳ-09- ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚಿಗೆ ಅಳವಂಡಿಯ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪಡೆದಿರುತ್ತಾರೆ. ೧೦೦ ಮೀಟರ್ ಓಟದಲ್ಲಿ ಸಂತೋಷ ಇಟಗಿ ಪ್ರಥಮ, ಪ್ರಭುಗೌಡ ದ್ವೀತಿಯ, ೧೫೦೦ ಮೀಟರ್ ಓಟದಲ್ಲಿ  ದೇವಪ್ಪ ವಟ್ಪರ ದ್ವೀತೀಯ, ಆನಂದ ವಡ್ಡರ ತೃತೀಯ , ಭಲ್ಲೆ ಎಸೆತದಲ್ಲಿ ರಾಮಕುಮಾರ ಪ್ರಥಮ, ಶೇಖರಪ್ಪ ತೃತೀಯ, ಉದ್ದಜಿಗಿತದಲ್ಲಿ ಸಂತೋಷ ಇಟಗಿ ಪ್ರಥಮ, ಗುಡ್ಡಗಾಡು ಓಟದಲ್ಲಿ  ದೇವಪ್ಪ ವಟ್ಪರವಿ ದ್ವೀತಿಯ, ೪*೧೦೦ ಮೀಟರ್ ರಿಲೇ ಓಟದಲ್ಲಿ ಶಾಲಿನಿ ಹಿರೇಮಠ ಪ್ರಥಮ, ಶಟಲ್ ಬ್ಯಾಡಮಿಟನ್ ಡಬಲ್ಸನಲ್ಲಿ ಶಾಲಿನಿ ಹಿರೇಮಠ ಮತ್ತು ಪಾರ್ವತಿ ಹಿರೇಮಠ ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ.  ಇದೇರೀತಿ ಗುಂಡು ಎಸೆತ, ಚಕ್ರ ಎಸೆತ,  ಸರಪಳಿ ಗುಂಡು ಎಸೆತ ಇವುಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜನರಲ್ ಚಾಂಪಿಯನ್ಸಗಳಾಗಿ ಆಯ್ಕೆಯಾಗಿರುತ್ತಾರೆ. ಈ ಎಲ್ಲ ಕ್ರೀಡಾಪಟುಗಳಿಗೆ ಎಸ್.ಜಿ ಸೋಲ್ ಟ್ರಸ್ಟಿಗಳಾದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಆಶಿರ್ವದಿಸಿದ್ದಾರೆ. ಎಸ್.ಜಿ ಟ್ರಸ್ಟಿನ ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ, ಪದವಿ ಪೂರ್ವ ಪ್ರಾಚಾರ್ಯ ಪರೀಕ್ಷಿತರಾಜ, ದೈಹಿಕ ನಿರ್ದೇಶಕ ಈಶಪ್ಪ ದೊಡ್ಮನಿ ಹಾಗೂ ಸಿಬ್ಬಂದಿ ವರ್ಗ  ಮತ್ತು ಸಕಲ ವಿದ್ಯಾರ್ಥಿ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us:
error