ನೀರನ್ನು ಕಾಯಿಸಿ, ಸೋಸಿ ಕುಡಿಯಲು ಮನವಿ.

ಕೊಪ್ಪಳ, ಅ.೦೫ (ಕ ವಾ) ಕೊಪ್ಪಳ ನಗರಸಭೆ ವತಿಯಿಂದ ನಗರಕ್ಕೆ  ಸರಬರಾಜಾಗುತ್ತಿರುವ ಕುಡಿಯುವ ನೀರನ್ನು ಕಾಯಿಸಿ,
ಸೋಸಿ ಕುಡಿಯುವಂತೆ ನಗರಸಭೆ ಪೌರಾಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    
ಕೊಪ್ಪಳ ನಗರಕ್ಕೆ ನೀರು ಸರಬರಾಜು ಆಗುವ ತಾಲೂಕಿನ ಕಾತರಕಿ ಹತ್ತಿರದ ತುಂಗಭದ್ರಾ ನದಿಯ
ಹಿನ್ನೀರಿಗೆ ಮಳೆನೀರು ಬಂದು ಸೇರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ
ಬಳಕೆಗಾಗಿ ನದಿ ನೀರನ್ನು ಶುದ್ಧೀಕರಿಸಿ ನೀಡಲಾಗುತ್ತಿದೆ. ಆದರೂ ಸಹ ಸಾರ್ವಜನಿಕರು
ಕುಡಿಯುವ ನೀರನ್ನು ಕಾಯಿಸಿ, ಸೋಸಿ ಕುಡಿಯಬೇಕು ಎಂದು ನಗರಸಭೆ ಪೌರಾಯುಕ್ತ ರಮೇಶ
ಪಟ್ಟೇದಾರ್ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Leave a Reply