fbpx

ನಿಗದಿತ ಅವಧಿಯೊಳಗೆ ಆರ್‌ಟಿಐ ಮಾಹಿತಿ ಕೊಡಿ- ಡಾ. ಶೇಖರ್ ಡಿ ಸಜ್ಜನರ್.

ಕೊಪ್ಪಳ ನ. ೦೭ (ಕ ವಾ) ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ನಿಗದಿತ ೩೦ ದಿನಗಳ ಒಳಗೆ ಮಾಹಿತಿ ಕೊಡುವ ಮೂಲಕ ಅಧಿಕಾರಿಗಳು ಅನಗತ್ಯವಾಗಿ ದಂಡ ಪಾವತಿಸುವುದು ಹಾಗೂ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬೇಕು ಎಂದು ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಶೇಖರ್ ಡಿ ಸಜ್ಜನರ್ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
     ಮಾಹಿತಿ ಹಕ್ಕು ಅಧಿನಿಯಮ ೨೦೦೫ ಕುರಿತಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಓಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
       ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕರಿಗೆ ಜವಾಬ್ದಾರಿ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ ೧೦ ವರ್ಷಗಳೇ ಕಳೆದಿದ್ದರೂ, ಕಾಯ್ದೆ ಕುರಿತು ಸಮರ್ಪಕ ಅರಿವು ಇಲ್ಲದ ಕಾರಣ, ಕಾಯ್ದೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಹಲವು ಗೊಂದಲಗಳಿಗೆ ಒಳಗಾಗುತ್ತಿದ್ದಾರೆ.  ಇದರಿಂದಾಗಿ ಮಾಹಿತಿ ಆಯೋಗದಿಂದ ದಂಡ ಮತ್ತು ತೊಂದರೆ ಅನುಭವಿಸುವಂತಾಗಿದೆ.  ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಗ್ರ ಅರಿವು ಹೊಂದಿದಾಗ ಮಾತ್ರ, ಇಂತಹ ತೊಂದರೆಯಿಂದ ಮುಕ್ತವಾಗಬಹುದಾಗಿದೆ.  ಮಾಹಿತಿ ಹಕ್ಕು ಅಧಿನಿಯಮದ ಅರ್ಜಿಗಳ ನೊಂದಣಿ ಪುಸ್ತಕವನ್ನು ಪ್ರತಿಯೊಂದು ಇಲಾಖೆಯಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕು.  ಆರ್‌ಟಿಐನಡಿ ಇಲಾಖೆಗೆ ಸಲ್ಲಿಕೆಯಾದ ಅರ್ಜಿಯ  ಕ್ರಮ ಸಂಖ್ಯೆ, ಅರ್ಜಿದಾರನ ಹೆಸರು, ಸಂಬಂಧಿಸಿದ ಮಾಹಿತಿ ಸೇರಿದಂತೆ ಕೆಲವು ಅಂಶಗಳನ್ನು  ನೊಂದಣಿ ಪುಸ್ತಕದಲ್ಲಿ ನಮೂದು ಮಾಡಬೇಕು. ಅಲ್ಲದೆ, ವಿವಿಧ ಮಾಹಿತಿಗೆ ಸಲ್ಲಿಕೆಯಾದ ಅರ್ಜಿಗೆ  ೩೦ ದಿನದ ಒಳಗೆ ಮಾಹಿತಿ ನೀಡುಬೇಕು.  ಇಲ್ಲದಿದ್ದರೆ ದಂಡ ಪಾವತಿ ಮಾಡಬೇ
ಕೋರ್ಟ್ ಮೋರೆ ಹೋಗುವಂತಿಲ್ಲ : ಯಾವುದೇ ಇಲಾಖೆಯಲ್ಲಿ ಆರ್‌ಟಿಐನಡಿ ಮಾಹಿತಿ ಕೇಳಿದ ವ್ಯಕ್ತಿ ಸಮರ್ಪಕ ಮಾಹಿತಿ ದೊರೆತಿಲ್ಲವಾದಲ್ಲಿ, ಮೇಲ್ಮನವಿ ಪ್ರಾಧಿಕಾರಕ್ಕೆ, ನಂತರ ಮಾಹಿತಿ ಆಯೋಗಕ್ಕೆ ಮನವಿ ಸಲ್ಲಿಸಬಹುದೇ ಹೊರತು,  ಅಧಿಕಾರಿ ವಿರುದ್ದ ಕೋರ್ಟ್ ಮೋರೆ ಹೋಗುವಂತಿಲ್ಲ. ಆದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶವಿದೆ. ಅಲ್ಲದೆ, ತಪ್ಪಿತಸ್ಥ ಅಧಿಕಾರಿ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡುವಂತಿಲ್ಲ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಶೇಖರ್ ಡಿ ಸಜ್ಜನರ್ ಅವರು ಹೇಳಿದರು.
     ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪವಿಭಾಗಾಧಿಕಾರಿ ಇಸ್ಲಾಯಿಲ್ ಸಾಹೇಬ್ ಶಿರಹಟ್ಟಿ, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ಇತರರು ಇದ್ದರು.

ಕಾಗುತ್ತದೆ.  ಸರ್ಕಾರದ ೩೩ ಇಲಾಖೆಗಳ ಪೈಕಿ ಐದು ಇಲಾಖೆಗಳಿಗೇ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿವೆ. ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಶಿಕ್ಷಣ ಹಾಗೂ ಗೃಹ ಇಲಾಖೆಗೆ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿವೆ.  ಗ್ರಾಮ ಮಟ್ಟದ ಪ್ರಥಮ ಮಾಹಿತಿ ಅಧಿಕಾರಿಯು ಅರ್ಜಿದಾರ ಕೇಳಿದ ಮಾಹಿತಿಯನ್ನು ನಿಗಧಿತ ದಿನದೊಳಗೆ ನೋಂದಾಯಿತ ಅಂಚೆ ಮೂಲಕ ಮಾಹಿತಿ ನೀಡಬೇಕು.  ಬಿಪಿಎಲ್ ಕಾರ್ಡ್ ಹೊಂದಿದ ವ್ಯಕ್ತಿ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿದರೆ, ನೂರು ಪುಟದ ಮಾಹಿತಿ ಮಾತ್ರ ಉಚಿತವಾಗಿ ನೀಡಬೇಕು. ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಅದಕ್ಕೆ ನಿಗದಿತ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಸೂಚನೆ ನೀಡಬೇಕು.    

Please follow and like us:
error

Leave a Reply

error: Content is protected !!