ವಿಧಾನಪರಿಷತ್ ಚುನಾವಣೆ ಮತದಾರರ ಅಂತಿಮ ಪಟ್ಟಿ ಪ್ರಕಟ.

ಕೊಪ್ಪಳ, ಡಿ.೧೧ (ಕ
ವಾ) ಕರ್ನಾಟಕ ವಿಧಾನಪರಿಷತ್ತಿಗೆ ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ
ಚುನಾವಣೆ ನಡೆಸುವ ಸಲುವಾಗಿ ಭಾರತ ಚುನಾವಣಾ ಆಯೋಗ ಮತ್ತು ಕರ್ನಾಟಕದ ಮುಖ್ಯ
ಚುನಾವಣಾಧಿಕಾರಿಗಳ ಸೂಚನೆಯಂತೆ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ
ಮತದಾರರ ಅಂತಿಮ ಪಟ್ಟಿಯನ್ನು ಡಿ. ೦೯ ರಂದು ಪ್ರಕಟಿಸಲಾಗಿದೆ.
    
ಪ್ರಕಟಿಸಲಾಗಿರುವ ಮತದಾರರ ಅಂತಿಮ ಪಟ್ಟಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಆಯಾ
ತಾಲೂಕು ತಹಸಿಲ್ದಾರರ ಕಚೇರಿಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಕೊಪ್ಪಳ ಅಪರ
ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.
Please follow and like us:
error