ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷಗೋಷ್ಠಿಗೆ ಅಂಗವಿಕಲರ ಒತ್ತಾಯ

ಕೊಪ್ಪಳ: ಅಂಗವಿಕಲರ ಸಮಸ್ಯೆ ಹಾಗೂ ಅವರನ್ನೇ ಕೇಂದ್ರವನ್ನಾಗಿಸಿದ ಸಾಹಿತ್ಯ-ಸೃಜನಶೀಲ ಕಾರ್ಯದ ಬಗ್ಗೆ ಬರುವ ಗಂಗಾವತಿಯಲ್ಲಿ ನಡೆಯಲಿರುವ 78ನೇ ಅಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಷಯ ಮಂಡನೆಯಾಗಬೇಕೆಂದು ಒತ್ತಾಯಿಸಲಾಗಿದೆ.
ಇದುವರೆಗೆ ನಡೆದಿರುವ ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಸಂಬಂಧಿಸಿದಂತೆ ಯಾವುದೇ ಗೋಷ್ಠಿ ಆಯೋಜಿಸಿಲ್ಲ.
ಅಂಗವಿಕಲರ ಸಮಸ್ಯೆಗಳನ್ನು ಮಾತ್ರವಲ್ಲ, ಅವರ ಸಮಸ್ಯೆ, ಮಾನಸಿಕ ಯಾತನೆ, ಸವಾಲುಗಳನ್ನು ಮೆಟ್ಟಿ ನಿಂತ ಬಗ್ಗೆ ಸಾಹಿತ್ಯವೂ ವಿಪುಲವಾಗಿ ಬಂದಿಲ್ಲ. ಆದರೆ, ಅವರ ದನಿಗೂ ಒಂದು ವೇದಿಕೆ ಕಲ್ಪಿಸಿ ಕೊಡುವ ಮೂಲಕ ಈ ಬಾರಿಯ ಸಾಹಿತ್ಯ ಸಮ್ಮೇಳನ ಅಂಗವಿಕಲರಿಗೆ ಸ್ಪಂದಿಸಲಿ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ  ಒಕ್ಕೂಟದ ರಾಜ್ಯ ಸಂಚಾಲಕ ಸುರೇಶ ಕುಷ್ಟಗಿ (ಅಂಗವಿಕಲರ ಪ್ರತಿನಿಧಿ) ಹಾಗೂ ಸಿಪಿಎಂ ಮುಖಂಡರೂ ಆಗಿರುವ ಮತ್ತೊಬ್ಬ ಸಂಚಾಲಕ ಜಿ.ಎನ್.ನಾಗರಾಜ್ (ಪಾಲಕರ ಪ್ರತಿನಿಧಿ),ಒತ್ತಾಯಿಸಿದ್ದಾರೆ.

Leave a Reply