ಮಹಾದಾಸೋಹಕ್ಕೆ ರಿಯಲ್ ಏಸ್ಟೇಟ್ ಅಸೋಸಿಯೇಶನ ೧೫ ಕ್ವಿಂಟಾಲ ಜಿಲೇಬಿ ಸಮರ್ಪಣೆ

 ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಕೊಪ್ಪಳದ ರಿಯಲ್ ಏಸ್ಟೇಟ್ ಡೆವಲಪರ‍್ಸ್ ಮತ್ತು ಏಜೆಂಟ್ಸ ಅಸೋಸಿಯೇಶನ್ ವತಿಯಿಂದ ೧೫ ಕ್ವಿಂಟಲ್ ಜಿಲೇಬಿ ದಿನಾಂಕ ೧೪ ರಂದು ಬುಧವಾರ ಅಶೋಕ್ ಸರ್ಕಲ್ ನಿಂದ ಭವ್ಯ ಮೇರವಣಿಗೆ ಮೂಲಕ ಶ್ರೀ ಗವಿಮಠಕ್ಕೆ ತೆರಳಿ, ಅಲ್ಲಿ ವಿಶೇಷ ಪೂಜೆ ನೇರವೇರಿಸಲಾಯಿತು.
               ಈ ಸಂದರ್ಭದಲಿ ಗವಿಮಠದ ಶ್ರೀ ಅಭಿನವಶ್ರೀ ಮಹಾಸ್ವಾಮಿಗಳ ಅಸೋಸಿಯೇಶನ್ ಭಕ್ತರಿಗೆ ಆಶಿರ್ವಾದ ಮಾಡಿ ಎಲ್ಲರಿಗೂ ಶುಭವಾಗಲೆಂದು ಹಾರೈಸಿದರು. 
ಅಶೋಕ್ ಸರ್ಕಲ್ ನಿಂದ ಜರುಗಿದ ಮೆರವಣಿಗೆಯಲ್ಲಿ ಅಸೋಸಿಯೇಶನ್ ಸದಸ್ಯರು ಹಾಗೂ ಅವರ ಗೆಳೆಯರ ಬಳಗ ಭಾಗವಹಿಸಿದ್ದರು. ಪ್ರಮುಖರಾದ ಕೆ.ಎಮ್. ಸೈಯದ್ ಅರ್ಜುನಸಾ ಕಾಟವ, ಮಹೇಶ ಹಳ್ಳಿ, ಮಂಜುನಾಥ ದಿವಟರ್, ಸೈಯದಸಾಬ ಬಗನಾಳ, ಕೆ. ಮೋಹನ್, ಗವಿಸಿದ್ದಪ್ಪ ಅಳವಂಡಿ, ಶಿವಾನಂದ ಹುದ್ಲೂರ್, ನಾಗರಾಜ ಬಳ್ಳಾರಿ, ಎಸ್.ಬಿ. ಮಾಲಿಪಾಟೀಲ್, ವಿರೇಶ ಹಾಲಸಮುದ್ರ, ಕೊಟ್ರಪ್ಪ ಕೊರಿ, ಶಂಕರ ನಿಂಗಲಬಂಡಿ, ಶಿವು ಕೊನಂಗಿ, ರವಿ ಕಿನ್ನಾಳ, ಶ್ರೀಕಾಂತ ದಲಬಂಜನ್, ಜಾಫರ್ ಟೇಲರ್, ಶಬ್ಬಿರ್ ಸಿದ್ದಖಿ ಮುಂತಾದವರು ಭಾಗವಹಿಸಿದ್ದು ವಿಶೇಷವಾಗಿತ್ತು.

Leave a Reply