ಅಲ್ಲಾಗಿರಿರಾಜ್ ಗೆ ’ಆಜೂರ ಕಾವ್ಯ’ ಪ್ರಶಸ್ತಿ

ಕನಕಗಿರಿ ೧೧ ಬೆಳಗಾವಿ ಜಿಲ್ಲೆಯ ಹಾರೊಗೇರಿ ಆಜೂರ ಪುಸ್ತಕ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಆಜೂರ ಕಾವ್ಯ ಪ್ರಶಸ್ತಿ-೨೦೧೫ ಈ ಭಾರಿ ಜಿಲ್ಲೆಯ ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ನೂರ್ ಗಜಲ್  ಸಂಕಲನಕ್ಕೆ ಬಂದಿದೆ  

ಆಜೂರ ಕಾವ್ಯ ಪ್ರಶಸ್ತಿಯು ಆರು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಬಳಗೊಂಡಿದ್ದು, ಇದೇ ತಿಂಗಳ ದಿನಾಂಕ ೧೪ ರಂದು ರಾಯಬಾಗ ತಾಲೂಕಿನ ಹಾರೋಗೇರಿ ಯಲ್ಲಿ ಜರುಗುವ ಲಿಂ ಗಂಗಮ್ಮ ರಾಮಪ್ಪ ಆಜೂರ ಅವರ ಪುಣ್ಯ ಸ್ಮರಣೆ ಸಮಾರಂಬದಲ್ಲಿ ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ   ಇವರಿಗೆ ಆಜೂರ ಕಾವ್ಯ ಪ್ರಶಸ್ತಿಯನ್ನು ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಶಿವನಂದ ಶ್ರೀಗಳು ಪ್ರಶಸ್ತಿ ಪ್ರಧಾನ ಮಾಡುವರೆಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಬಿ ಆರ್ ಆಜೂರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ  ನೂರ್ ಗಜಲ್ ಸಂಕಲನಕ್ಕೆ ಇದು ೯ನೇ ಕಾವ್ಯ ಪ್ರಶಸ್ತಿಯಾಗಿದೆ.
ಆಯ್ಕೆ : ಇದೇ ದಿನಾಂಕ ೧೫ ರಂದು ಜರುಗುವ ಮುಧಬಿಳದ ರನ್ನ ವೈಭವ ಉತ್ಸವದ ರಾಜ್ಯ ಮಟ್ಟದ ಕವಿಗೊಷ್ಠಿಗೆ ಜಿಲ್ಲೆಯ ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಇವರು ಆಯ್ಕೆಯಾಗದ್ದರಂದು ಉತ್ಸವ ಸಮಿತಿ   ತಿಳಿಸಿದೆ  
Please follow and like us:
error