fbpx

ಪುಣ್ಯಾರಾಧನೆಯ ನಿಮಿತ್ಯ ಯಶಸ್ವೀ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಾರಾಧನೆಯ ನಿಮಿತ್ಯ ಯಶಸ್ವೀ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ಕೊಪ್ಪಳ: ನಗರದ  ಶ್ರೀಗವಿಮಠದಲ್ಲಿ ದಿನಾಂಕ ೧೫-೦೩-೨೦೧೫ ರವಿವಾರ ಬೆಳಿಗ್ಗೆ ೧೦ ರಿಂದ ೪ ಗಂಟೆಯವರೆಗೆ ಲಿಂಗೈಕ್ಯ ಜ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಸ್ಮರಣೆಯ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಶ್ರೀಗವಿಮಠದ ಆವರಣದಲ್ಲಿ  ನಡೆಯಲಿದೆ. 
             ಈ ಶಿಬಿರದಲ್ಲಿ ನಾಡಿನ ಹೆಸರಾಂತ ವೈದ್ಯರು ಭಾಗವಹಿಸಿ ವಿವಿಧ  ರೋಗಿಗಳ ತಪಾಸಣೆ ನಡೆಸಿ ನಂತರ ಚಿಕಿತ್ಸೆ ನೀಡುವರು.  ಕೊಪ್ಪಳ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಈ ಶಿಬಿರದ  ಉಪಯುಕ್ತತೆ ಮಾಡಿಕೊಳ್ಳಬೇಕೆಂದು  ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಪ್ರಾಚಾರ್ಯ  ಡಾ.ಬಸವರಾಜ ಸವಡಿ   ತಿಳಿಸಿದ್ದಾರೆ
Please follow and like us:
error

Leave a Reply

error: Content is protected !!