You are here
Home > Koppal News > ಪುಣ್ಯನಂದಪುರಿ ಮಹಾಸ್ವಾಮಿಗಳವರ ೮ನೇ ಪುಣ್ಯಾರಾಧನೆ ಕಾರ್ಯಕ್ರಮ

ಪುಣ್ಯನಂದಪುರಿ ಮಹಾಸ್ವಾಮಿಗಳವರ ೮ನೇ ಪುಣ್ಯಾರಾಧನೆ ಕಾರ್ಯಕ್ರಮ

ಹೊಸಪೇಟೆ: ಹಿಂದೆ ಜೀವನೋಪಾಯಕ್ಕಾಗಿ ಬೇಡ ಜನಾಂಗಕ್ಕೆ ಬೇಟೆ ಇತ್ತು, ಬಿಲ್ಲು, ಬಾಣ ಇತ್ತು. ಈಗ ಅವೆರಡೂ ಇಲ್ಲ, ಈಗ ಜೀವನೋಪಾಯಕ್ಕಾಗಿ ನಾಯಕ ಸಮಾಜ ಪೆನ್ನು ಹಿಡಿಯಲೇಬೇಕಾದ ಅನಿವಾರ್ಯತೆ ಇದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಹೇಳಿದರು.
ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಜಗದ್ಗುರು ಪುಣ್ಯನಂದಪುರಿ ಮಹಾಸ್ವಾಮಿಗಳವರ ೮ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ತಳಸಮುದಾಯಗಳಿಗೆ ಕಸಬುಗಳೇ ಕುಲಗಳಾಗಿದ್ದವು. ಅದರಿಂದ ಜೀವನೋಪಾಯ ನಡೆಯುತ್ತಿತ್ತು. ಆದರೆ ದುರ್ದೈವ, ಬರುಬರುತ್ತಾ ಕಸಬುಗಳೆಲ್ಲ ನಾಶವಾಗಿ, ಬರೀ ಕುಲಗಳೇ ಉಳಿದವು. ಈಗ ಜೀವನ ಮಾಡಲು ತಳಸಮುದಾಯಗಳು ಪೆನ್ನು ಹಿಡಿಯಲೇಬೇಕಾಗಿದೆ .ವಾಲ್ಮೀಕಿ ನಾಯಕ ಜನಾಂಗವನ್ನು ಇತರೇ ಸಮಾಜದ ಮಠಗಳಿಗೆ ಕಡಿಮೆಯಿಲ್ಲವೆಂಬುವಂತೆ,ಶೈಕ್ಷಣಿಕವಾಗಿ, ರಾಜಕೀಯವಾಗಿ, ಮುಂದೆ ಬರಲು ಲಿಂಗೈಕ್ಯ ಪುಣ್ಯಾನಂದಪುರಿ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ . ವಾಲ್ಮೀಕಿ ನಾಯಕ ಜನಾಂಗಕ್ಕೆ ತನ್ನದೇ ಆದ ಪರಂಪರೆ ಇದೆ, ಈ ಸಮಾಜ ಅತಿ ಹೆಚ್ಚು ಯುದ್ದಗಳನ್ನು ಮಾಡಿದ, ಅತಿ ಹೆಚ್ಚು ಕೋಟೆಗಳನ್ನು ಕಟ್ಟಿದ, ಶತ್ರುಗಳಿಂದ ವಿಜಯನಗರ ಸಾಮ್ರಾಜ್ಯವನ್ನು ರಕ್ಷಿಸಿದ ಕೀರ್ತಿ ನಾಯಕ ಸಮಾಜಕ್ಕೆ ಸಲ್ಲುತ್ತದೆ ಎಂದರು. 
ಜವಳಿ ಅಭಿವೃದ್ದಿ ನಿಗಮ ಮಂಡಳಿ ಉಪಾಧ್ಯಕ್ಷೆ ಬಿ. ಕಮಲಾ ಮರಿಸ್ವಾಮಿ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜಕ್ಕೆ ಕುಡಿತದಿಂದ ಗೌರವವಿಲ್ಲದಂತಾಗಿದೆ, ನಾವು ಇತರೇ ಸಮಾಜದಂತೆ ಕುಡಿತ ಬಿಟ್ಟು ವಿದ್ಯಾವಂತರಾಗಬೇಕು, ಸಮಾಜ ತೀರಾ ಹಿಂದುಳಿದಿದೆ. ನಮ್ಮ ಜನಾಂಗಕ್ಕೆ ಕೇಂದ್ರ, ಹಾಗು ರಾಜ್ಯ ಸರ್ಕಾರದಿಂದ ಅನೇಕ ಸೌಲಭ್ಯಗಳೂ ಇವೆ. ಅವುಗಳ ಸದುಪಯೋಗೊಡಿಸಿಕೊಳ್ಳಬೇಕು ಎಂದರು.ರಾಜ್ಯದಲ್ಲಿ ಜನಾಂಗವನ್ನು ವಿವಿಧ ಹೆಸರುಗಳಿಂದ ಕರೆಯುತ್ತಿದ್ದು, ಜಾತಿಜನಗಣತಿಯಲ್ಲಿ ಯಾವುದನ್ನು ನಮೂದಿಸಬೇಕು ಎಂದು ಗೊಂದಲವಿದೆ. ಶ್ರೀಗಳ ಜೊತೆ ಚರ್ಚಿಸಿ, ಕೊನೆಗೆ ಅವರು ಸೂಚಿಸಿದ ಹೆಸರನ್ನೇ ನಮೂದಿಸುವಂತೆ ತಿಳಿಸಲಾಗುವುದು ಎಂದರು. ಸಮಾರಂಭದ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಹಾಗು ಗಾಯಿತ್ರಿ ಪೀಠ ಮಹಾಸಂಸ್ಥಾನದ ಜಗದ್ಗುರು ದಯಾನಂದಪುರಿ ಮಹಾಸ್ವಾಮಿಗಳು ವಹಿಸಿದ್ದರು. ವಾಲ್ಮೀಕಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ಬಿ.ಎಸ್.ಜಂಬಯ್ಯನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಜವಳಿ ಅಭಿವೃದ್ಧಿ ನಿಗಮ ಮಂಡಳಿ ಉಪಾಧ್ಯಕ್ಷೆ ಬಿ.ಕಮಲಾ ಮರಿಸ್ವಾಮಿ, ಪ್ರಾಧ್ಯಾಪಕ ಕಿಚಡಿ ಚನ್ನಪ್ಪ, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಸದಸ್ಯ ರಾಘವೇಂದ್ರ ಗುಂಡಿ, ಭೂನ್ಯಾಯ ಮಂಡಳಿ ಸದಸ್ಯ ತಾರಿಹಳ್ಳಿ ಜಂಬಯ್ಯ, ಡಾಕ್ಟರೇಟ್ ಪದವಿ ಪಡೆದ ಗುಂಡಿ ಮಾರುತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.  ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಶ್ರೀಕಂಠ, ಬಿಜೆಪಿ ಮುಖಂಡ ಸಂದೀಪ್ ಸಿಂಗ್, ಎಪಿಎಂಸಿ ಅಧ್ಯಕ್ಷ ಸೋಮಶೇಖರ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಎನ್. ಗಂಗಮ್ಮ ತಿಪ್ಪೇಸ್ವಾಮಿ, ನಾಯಕ ಸಮಾಜದ ಮುಖಂಡ ಜಂಬಾನಳ್ಳಿ ವೆಂಕೋಬಣ್ಣ, ರೈತ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ತಾಲೂಕು ಪಂಚಾಯ್ತಿ ಸದಸ್ಯ ರಹಮತ್ ಗೌಡ, ಗುಜ್ಜಲ ಶ್ರೀನಿವಾಸ, ಬಿ.ರಾಮು, ಗ್ರಾಮ ಪಂಚಾಯ್ತಿ ಸದಸ್ಯ ಎನ್.ಗೋಪಾಲ, ಬಿ.ರಾಮು, ವಾಲ್ಮೀಕಿ ಸಮಾಜದ ಮುಖಂಡ ನಾಯಕರ ಮೆಟ್ನಯ್ಯ, ಜಿಲ್ಲಾ ನಿರ್ದೇಶಕ ಗುಜ್ಜಲ ಶ್ರೀನಿವಾಸ, ನಾಡಿಗರ ಹನುಮಂತರೆಡ್ಡಿ, ನೂಕಯ್ಯ, ಗುಜ್ಜಲ ದೇವಪ್ಪ, ಎಂ.ತಿಮ್ಮಪ್ಪ, ಎಂ.ಪಂಪಣ್ಣ, ಎನ್.ರಾಮಾಂಜಿನಿ, ತಳವಾರ ಸಿದ್ದಪ್ಪ, ನಾಯಕರ ಸಿದ್ದಪ್ಪ ಹಾಗೂ ನಗರಸಭೆ ಸದಸ್ಯರಾದ ಇದ್ಲಿ ಚನ್ನಮ್ಮ, ಪದ್ಮಾವತೆಮ್ಮ, ನೂರ್ ಜಹಾನ್, ವಿ.ಅಂಜಿನಿ, ಗುಜ್ಜಲ ನಿಂಗಪ್ಪ, ಗುಡೆಗುಂಟೆ ಮಲ್ಲಿಕಾರ್ಜುನ, ಶ್ರೀಧರ ನಾಯ್ಡು ಹಾಜರಿದ್ದರು. ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾರಿಹಳ್ಳಿ ವೆಂಕಟೇಶ್ ನಿರೂಪಿಸಿದರು. ಎನ್. ಹೊನ್ನೂರಪ್ಪ ಸ್ವಾಗತಿಸಿದರು.  ಸಮಾರಂಭದ ಮುನ್ನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು ೫೦ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

Leave a Reply

Top