ಭಾರತೀಯ ಜನತಾ ಪಾರ್ಟಿ ಜಿಲ್ಲಾ ಹಿಂದುಳಿದ ವರ್ಗ ಮೊರ್ಚಾದಿಂದ ಬೃಹತ ಪ್ರತಿಭಟನೆ ಹಾಗೂ ಜೈಲು ಬರೋ ಕಾರ್ಯಕ್ರಮ.

ದಿ:೨೪/೦೬/೨೦೧೫ ರಂದು ರಾಜ್ಯ ಹಿಂದೂಳಿದ ವರ್ಗ ರಾಜ್ಯಾಧ್ಯಕ್ಷರಾದ ಕೊಟಾ ಶ್ರೀನಿವಾಸ ಹಾಗೂ ಕೊಪ್ಪಳ ಜಿಲ್ಲಾ ಹಿಂದೂಳಿದ ವರ್ಗದ ಅಧ್ಯಕ್ಷರಾದ ಉಮೇಶ ಸಜ್ಜನ್ ಇವರ ನೇತೃತ್ವದಲ್ಲಿ ಕನಕಗಿರಿಯ ಕನಕಾಪೂರದ ಯಲ್ಲಾಲಿಂಗನ ಹತ್ಯೆಯ ವಿರುದ್ದ ಪ್ರತಿಭಟಿಸಿ ಬೃಹತ್ ಪ್ರತಿಭಟನೆ ಹಾಗೂ ಜೈಲು ಭರೋ ಕಾರ್ಯಕ್ರಮ ೧೧:೦೦ ಗಂಟೆಗೆ ಅಶೋಕ ವೃತ್ತದಿಂದ ಪ್ರಾರಂಭಿಸಿ ಬಸವೇಶ್ವರ ವೃತ್ತದವರೆಗೆ ೨:೦೦ ಗಂಟೆಯವೆರಗೆ ಜೈಲು ಭರೋ ಕಾರ್ಯಕ್ರಮದ ಮೂಲಕ ಮುಕ್ತಾಯಗೊಳ್ಳುವುದು. ಇದರಲ್ಲಿ ಮಾಜಿ ಸಚಿವರು, ಹಿಂದೂಳೀದ ವರ್ಗದ ನಾಯಕರು, ಬಳ್ಳಾರಿ ಸಂಸದರಾದ ಶ್ರೀರಾಮುಲುರವರು ಕೊಪ್ಪಳ ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷರು ಹಾಗೂ ಸಂಸದರಾದ ಕರಡಿ ಸಂಗಣ್ಣ, ಶಾಸಕರು ಹಾಗೂ ಕರ್ನಾಟಕ ಮಾರ್ಕೆಟಿಂಗ್ ಫೆಡೆರೆಶನ್ ಅಧ್ಯಕ್ಷರು ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷರಾದ ಹಾಲಪ್ಪ ಆಚಾರ, ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ರಾಜ್ಯ ರೈತ ಮೊರ್ಚಾ ಉಪಾದ್ಯಕ್ಷರಾದ ಗಿರಿಗೌಡ್ರು, ದಡೇಸೂರು ಬಸವರಾಜ, ಕೊಲ್ಲಾ ಶೇಷಗಿರಿರಾವ್, ಹಾಗೂ ಜಿಲ್ಲಾ ಮುಖಂಡರು ಭಾಗವಹಿಸುವರು ಕಾರಣ ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲೂಕ ಮುಖಂಡರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಹಾಗೂ ಜೈಲು ಭರೋ ಕಾಯ್ಖ್ರಮದಲ್ಲಿ ಭಾಗವಹಿಸಿ ಯಲ್ಲಾಲಿಂಗನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಕೊಪ್ಪಳ ಜಿಲ್ಲಾ ಬಿ.ಜೆ.ಪಿ. ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error