ಸಿ.ಸಿ.ರಸ್ತೆ ಕಾಮಗಾರಿಗೆ ನಗರಸಭೆ ಉಪಾಧ್ಯಕ್ಷ ಪಟೇಲ್‌ರಿಂದ ಚಾಲನೆ

ಕೊಪ್ಪಳ,ಮೇ.೦೭: ನಗರದ ೩ನೇ ವಾರ್ಡ್‌ನ ಹಮಾಲರ ಕಾಲೋನಿಯಲ್ಲಿ ಬುಧವಾರದಂದು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ನಗರ ಪ್ರದೇಶಕ್ಕೆ ಮಂಜೂರಾದ ಅನುದಾನದಡಿಯಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಕೊಪ್ಪಳ ನಗರಸಭೆ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೊಪ್ಪಳ ನಗರಕ್ಕೆ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಡಿಯಲ್ಲಿ ಮಂಜೂರಾದ ಅನುದಾನದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಪ್ರಾರಂಭವಾಗಬೇಕಿದ್ದ ಕಾಮಗಾರಿಗಳು ಇಂದು ಪ್ರಾರಂಭವಾಗುತ್ತಿದ್ದು, ಸ್ಥಳದಲ್ಲಿ ಉಪಸ್ಥಿತರಿದ್ದ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಯೂ ತೀವ್ರಗತಿಯಲ್ಲಿ ಹಾಗೂ ಒಳ್ಳೆಯ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಲು ಸೂಚಿಸಿದ ಅವರು, ಕೊಪ್ಪಳ ನಗರಕ್ಕೆ ವಿವಿಧ ಯೋಜನೆ ಅಡಿಯಲ್ಲಿ ಕೊಪ್ಪಳ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರ ಅನುದಾನವನ್ನು ಮಂಜೂರು ಮಾಡಿದ್ದು ಹಾಗೂ ಕೊಪ್ಪಳ ನಗರಕ್ಕೆ ತೀವ್ರಗತಿಯಲ್ಲಿ ೨ನೇ ಹಂತದ ಕುಡಿಯುವ ನೀರಿನ ಕಾಮಗಾರಿಗೆ ಕೂಡ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಆ ಕಾಮಗಾರಿಯು ತೀವ್ರಗತಿಯಲ್ಲಿ ಕ್ರಮಕೈಗೊಳ್ಳಲು ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ. 
ಈ ಸಂದರ್ಭದಲ್ಲಿ ನಗರಸಭೆ ಕಿರಿಯ ಅಭಿಯಂತರರಾದ ಶಂಕ್ರಪ್ಪ, ಗುತ್ತಿಗೆದಾರರಾದ ಕೃಷ್ಣ ಇಟ್ಟಂಗಿ, ಇನ್‌ಪ್ರಾಟೆಚ್ಚರ್ ಇಂಜನಿಯರಾದ ಅನೀಫ್, ಇನ್ನೋರ್ವ ಇಂಜನಿಯರ್ ಮುಸ್ತಫಾ, ಅನ್ವರ್ ಪಟೇಲ್, ಗುತ್ತಿಗೆದಾರರಾದ ಶ್ರೀನಿವಾಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Please follow and like us:
error