ರಾಹುಲ ಗಾಂಧಿ ಫಿನಿಕ್ಸನಂತೆ ಎದ್ದುಬರಲಿದ್ದಾರೆ – ಎಂ. ಪಾಷ ಕಾಟನ್

 ದೇಶದಲ್ಲಿ ಮುಂದಿನ ದಿನಮಾನಗಳಲ್ಲಿ ರಾಹುಲ ಗಾಂಧಿಯವರ ನಾಯಕತ್ವದ ಅವಶ್ಯಕತೆ ಇದ್ದು, ಸದ್ಯದ ಮಟ್ಟಿಗೆ ಕಾಂಗ್ರೆಸ ಪಕ್ಷಕ್ಕೆ ಸೋಲಾಗಿದ್ದರೂ ಅದು ಕ್ಷಣಿಕ ಫಿನಿಕ್ಸ ಹಕ್ಕಿಯಂತ ಎದ್ದುಬಂದು ಪಕ್ಷಕ್ಕೆ ಆನೆಬಲ ತಂದುಕೊಡಲಿದ್ದಾರೆ ಎಂದು ವಿಧಾನಸಭಾ ಯುವ ಕಾಂಗ್ರೇಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಅಭಿಪ್ರಾಯ ಪಟ್ಟರು. 
ಎಐಸಿಸಿ ಉಪಾಧ್ಯಕ್ಷರಾದ ರಾಹುಲ ಗಾಂಧಿಯವರ ಹುಟ್ಟು ಹಬ್ಬದ ನಿಮಿತ್ಯ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ ಮಾಡುತ್ತಾ ಮಾತನಾಡಿದ ಅವರು ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್, ಗ್ಯಾಸ್, ಮತ್ತು ರಸಗೊಬ್ಬರಗಳ ಬೆಲೆ ಏರಿಕೆ ಮುನ್ಸೂಚನೆಯನ್ನು ನೀಡಿದ್ದು ಮಧ್ಯಮ ವರ್ಗದ ಮತ್ತು ರೈತರ ಹೊಟ್ಟೆಯಮೇಲೆ ಬರೇ ಹಾಕುವ ಹುನ್ನಾರು ನಡೆಯುತ್ತಿದ್ದು ಇದರ ವಿರುದ್ದ ಯುವ ಕಾಂಗ್ರೇಸ್ ಮುಂದಿನ ದಿನಮಾನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಿದೆ. 
  ಯುವ ಮುಖಂಡರಾದ ಕೆ. ರಾಜು ಹಿಟ್ನಾಳ, ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ದಾಸರಡ್ಡಿ, ಅರುಣ ಇನಾಮತಿ, ನಗರಸಭಾ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಮಾನ್ವಿ ಪಾಷಾ, ಗುರುರಾಜ ಹಲಗೇರಿ, ಶಿವು ಪಾವಲಿ, ಶರಣಪ್ಪ ಸಜ್ಜನ್, ಅಜ್ಜಪ್ಪ ಸ್ವಾಮಿ, ಅಕ್ಬರ್ ಪಾಷಾ ಪಲ್ಟನ್, ಶಿವಾನಂದ ಹೊದ್ಲೂರ್, ಅರುಣ ಶೆಟ್ಟಿ, ಹನಮೇಶ ಹೊಸಳ್ಳಿ, ಕಬೀರ ಸಿಂದೋಗಿ, ಜಾಫರ್ ಸಂಘಟಿ, ಗಫಾರ ದಿಡ್ಡಿ, ಮೈಹಿಬೂಬ್ ಅಯಾಜ್, ಅಬೂಬಕರ್, ಅಜೀಮ್, ರಫಿ ಆರ್.ಎಂ, ಬಸವರಾಜ ಗೋಣಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು .
Please follow and like us:

Related posts

Leave a Comment