ಮತದಾರರ ಜಾಗೃತಿ : ಏ. ೩ ರಂದು ಕೊಪ್ಪಳದಲ್ಲಿ ಮ್ಯಾರಥಾನ್ ಓಟ

  ಮತದಾರರ ಜಾಗೃತಿ ಕಾರ್ಯಕ್ರಮ ‘ಸ್ವೀಪ್’ ಯೋಜನೆಯಡಿ ಏ. ೦೩ ರಂದು ಬೆಳಿಗ್ಗೆ ೮ ಗಂಟೆಗೆ ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
  ಅಂದು ಬೆಳಿಗ್ಗೆ ೮ ಗಂಟೆಗೆ ನಗರದ ಎಲ್ಲ ಸರ್ಕಾರಿ, ಖಾಸಗಿ ಪ್ರಥಮ ದರ್ಜೆ ಕಾಲೇಜು, ಡಿ.ಇಡಿ, ಎನ್.ಎಸ್.ಎಸ್./ಎನ್.ಸಿ.ಸಿ. ಸೇರಿದಂತೆ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಗರದ ಸಾರ್ವಜನಿಕ ಮೈದಾನದಲ್ಲಿ ಸೇರಿ, ಮತದಾರರ ಪ್ರತಿಜ್ಞಾ ವಿಧಿ ತೆಗೆದುಕೊಳ್ಳಬೇಕು.  ನಂತರ ವಿದ್ಯಾರ್ಥಿಗಳಿಂದ ಮ್ಯಾರಥಾನ್ ಜಾಗೃತಿ ಓಟ ಹಮ್ಮಿಕೊಳ್ಳಲಾಗಿದ್ದು, ಮ್ಯಾರಥಾನ್ ಓಟವು ಸಾರ್ವಜನಿಕ ಮೈದಾನದಿಂದ ತಾ.ಪಂ. ರಸ್ತೆ ಮೂಲಕ ಗವಿಮಠ ರಸ್ತೆ, ಗಡಿಯಾರಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನಕ್ಕೆ ಮುಕ್ತಾಯಗೊಳ್ಳಲಿದೆ.  ಈ ಮ್ಯಾರಥಾನ್ ಓಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.  ಕೊಪ್ಪಳದ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ   ತಿಳಿಸಿದ್ದಾರೆ.

Related posts

Leave a Comment