ಮರೆಯಾದ ಸ್ವದೇಶಿ ಹೋರಾಟಗಾರ ರಾಜೀವ್ ದೀಕ್ಷಿತ್

ಸ್ವದೇಶಿ ಹೋರಾಟಗಾರ , ವಿಜ್ಞಾನಿ ಹಾಗೂ ಖ್ಯಾತ ಭಾಷಣಕಾರ ರಾಜೀವ ದೀಕ್ಷಿತ್ ಮಂಗಳವಾರ ಹೈದಯಾಘಾತದಿಂದ ನಿಧನರಾದರು. ತಮ್ಮ ಸ್ವದೇಶಿ ಪರ ಹೋರಾಟಗಳಿಂದ ಖ್ಯಾತರಾಗಿದ್ದ ಅವರು ಒಮ್ಮೆ ಕೊಪ್ಪಳಕ್ಕೂ ಬೇಟಿ ನೀಡಿದ್ದರು. ಕೊಪ್ಪಳದ ಕೆಲ ಪ್ರಗತಿಪರ ಮಿತ್ರರು ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಪಾಲ್ಗೊಂಡು ವಿದೇಶಿ ಕಂಪನಿಗಳ ಹುನ್ನಾರದ ಬಗ್ಗೆ ಮಾತನಾಡಿದ್ದರು.
ವಿದೇಶಿ ವಸ್ತುಗಳಲ್ಲಿರುವ ಕೆಮಿಕಲ್ ವಿಷಕಾರಕ ವಸ್ತುಗಳ ಬಗ್ಗೆ ಜನಜಾಗೃತಿ ಮೂಡಿಸಲು ಅವರು ಸದಾ ಪ್ರಯತ್ನಿಸುತ್ತಿದ್ದರು. ಭ್ರಷ್ಟತೆಯ ವಿರುದ್ದ ಹೋರಾಟವನ್ನೇ ಹಮ್ಮಿಕೊಂಡಿದ್ದ ಅವರು ಸ್ವದೇಶಿ ವಸ್ತುಗಳ ಬಳಕೆಗೆ ಪ್ರೇರಣೆ ನೀಡುತ್ತಿದ್ದರು.
Please follow and like us:
error