ಸೌಹಾರ್ಧತೆ ಸಹ ಬಾಳುವೆ ನಮ್ಮ ಸಂಸ್ಕೃತಿಯ ಮೆರಗು : ಕೆ. ಬಸವರಾಜ ಹಿಟ್ನಾಳ

ಕೊಪ್ಪಳ ೧೬: ನಗರದ ಹುಲಿಕೆರೆ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ ಮಾತನಾಡಿ ಭಾರತ ದೇಶವು ವಿವಿಧ ಧರ್ಮಗಳ ನಾಡಾಗಿದ್ದು ಬೇರೆ ಬೇರೆ ಸಂಪ್ರದಾಯಗಳ ನಾಡಾಗಿದ್ದು ನಮ್ಮ ದೇಶದಲ್ಲಿ ಸೌರ್ಹಾದತೆಯಿಂದ ಹಾಗೂ ಸಹ ಬಾಳವೆಯಿಂದ ಸಮಾಜದಲ್ಲಿ ಶಾಂತಿಯಿಂದ ನೆಲೆಸಿರುವುದೇ ನಮ್ಮ ದೇಶದ ಸಂಸ್ಕೃತಿಯ ಮೆರೆಗಾಗಿದೆ, ಬಕ್ರೀದ್ ಹಬ್ಬದ ಆಚರಣೆ ತ್ಯಾಗ ಬಲಿದಾನದ ಸಂಕೇತವಾಗಿದೆ ಎಂದು ಹೇಳಿದರು.
    ಮುಸ್ಲೀಂ ಸಮಾಜದ ಧುರೀಣರಾದ ಬಾಶುಸಾಬ ಖತೀಬ್ ಹಾಗೂ ಅಜಗರಲಿ ನವಾಬ್ ಅವರು ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ ಇವರಿಗೆ ನಗರದ ಮುಸ್ಲೀಂ ಬಾಂಧವರ ವತಿಯಿಂದ ಬಕ್ರೀದ್ ಹಬ್ಬದ ಸಂಬ್ರಮ ಆಚರಣೆಯ ಶುಭ ಕೋರಿ ಸನ್ಮಾನಿಸಿದರು.
    ಈ ಸಂದರ್ಭದಲ್ಲಿ ಧರ್ಮಗುರುಗಳಾದ ಮುಫ್ತಿ ನಜೀರ್ ಅಹ್ಮದ್‌ಸಾಬ, ಎಪಿಎಂಸಿ. ಅಧ್ಯಕ್ಷ ಡಿ.ಮಲ್ಲಣ್ಣ, ಜುಲ್ಲು ಖಾದ್ರಿ, ಮೌಲಾ ಹುಸೇನ್ ಜಮಾದಾರ, ಮುನೀರ್ ಕೋತ್ವಾಲ, ಶಿವಾನಂದ ಹೊದ್ಲೂರು, ಕೃಷ್ಣಾ ಇಟ್ಟಂಗಿ, ಗವಿಸಿದ್ದಪ್ಪ ಮುದಗಲ್ಲ ಹಾಗೂ ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error