ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳ ಆಯ್ಕೆ

ಕೊಪ್ಪಳ : ಅ. ೩೦, ಇತ್ತೀಚೆಗೆ ನಗರದ ಹೊರವಲಯದಲ್ಲಿರುವ ಶ್ರೀ ಮಳಿಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಕಳಕನಗೌಡ ಜಮ್ಮಾಪೂರ ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. 
ಸಭೆಯಲ್ಲಿ ಜಿಲ್ಲೆಯ ಸಂಘದ ಪಧಾದಿಕಾರಿಗಳು ಹಾಗೂ ತಾಲೂಕ ಪಧಾದಿಕಾರಿಗಳು ಸಮ್ಮುಖದಲ್ಲಿ ಸಮಾಜದ ಸಂಘಟನೆಗಾಗಿ ಜಿಲ್ಲಾ ಯುವ ಘಟಕದ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹರಸೈನ್ಯ ರಾಜ್ಯ ಸಂಘಟನಾ ಕಾರ್ಯದರ್ಶಿ ರುದ್ರಗೌಡ ಸಲೂಬಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಕರ್ನಾಟಕ ವೀರಶೈವ ಪಂಚಮಸಾಲಿ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ದೇವರಾಜ್ ವೀರಣ್ಣ ಹಾಲಸಮುದ್ರ ಸಾ. ಕೊಪ್ಪಳ ಪ್ರಧಾನ ಕಾರ್ಯದರ್ಶಿ ಯಾಗಿ ಶರಣಪ್ಪ ಎಸ್. ಮೇಟಿ ಸಾ. ಓಜನಹಳ್ಳಿ, ಮತ್ತು ಖಜಾಂಚಿಗಳಾಗಿ ಶರಣಪ್ಪ ಆರ್. ಆನೆಗೊಂದಿ, ಸಾ. ಅಗಳಕೇರ ಇವರುಗಳನ್ನು ಆಯ್ಕೆ ಮಾಡಿ ಮತ್ತು ಸಮಾಜದ ಸಂಘಟನೆ ಹಾಗೂ ಅಭಿವೃದ್ದಿಗೆ ಕೊಂಡಯ್ಯಲು ಶ್ರಮಿಸಬೇಕೆಂದು  ಜಿಲ್ಲಾಧ್ಯಕ್ಷ ಕಳಕಪ್ಪ ಜಮಾಪೂರ ಹೇಳಿದರು. ಇದೇ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಅಧ್ಯಕ್ಷರಾದ ಕರಿಯಪ್ಪ ಮೇಟಿ ಸಾ. ಗಿಣಗೇರಿ, ಹಾಗೂ ಗಂಗಾವತಿ ತಾಲೂಕ ಬಸಪ್ಪ ತಂ/ ಪಂಪನಗೌಡ ಕಂಪ್ಲಿ, ಸಾ. ಹಾಲಸಮುದ್ರಾ, ಯಲಬುರ್ಗಾ ತಾಲೂಕಾ ಅಧ್ಯಕ್ಷರಾದ ಬಸಣ್ಣನವರು, ಮತ್ತು ಸಮಾಜದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರೆಂದು ರಾಜ್ಯ ಹರಸೈನ್ಯ ಸಂಘಟನಾ ಕಾರ್ಯದರ್ಶಿ ರುದ್ರಗೌಡ ಸಲೂಬಗೌಡ ತಿಳಿಸಿದ್ದಾರೆ. 

Leave a Reply