ಮೈಸೂರು ದಿಗಂತ ಪ್ರಶಸ್ತಿ-೨೦೧೪ : ಅರ್ಜಿ ಆಹ್ವಾನ

  ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ/ವರದಿ ಬರೆದ ಪತ್ರಕರ್ತರಿಗೆ ಕೊಡಮಾಡುವ ಮೈಸೂರು ದಿಗಂತ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
  ಮೈಸೂರಿನ ’ಮೈಸೂರು ದಿಗಂತ’ ಪತ್ರಿಕಾ ಸಂಸ್ಥೆಯು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ಒಂದು ಲಕ್ಷ ರೂ.ಗಳ ದತ್ತಿ ಸ್ಥಾಪಿಸಿದೆ.  ಈ ದತ್ತಿಯಿಂದ ಪ್ರತಿವರ್ಷ ಕೊಡಮಾಡುವ ಮೈಸೂರು ದಿಗಂತ ಪ್ರಶಸ್ತಿಗಾಗಿ ೨೦೧೪ನೇ ಸಾಲಿನಲ್ಲಿ (೨೦೧೪ರ ಜನವರಿ-ಡಿಸೆಂಬರ್‌ವರೆಗೆ) ಪ್ರಕಟವಾಗಿರುವ ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ, ವರದಿಯೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವ ಪತ್ರಕರ್ತರು ತಮ್ಮ ಸ್ವವಿವರಗಳನ್ನು ಬಿಳಿ ಹಾಳೆಯಲ್ಲಿ ಬರೆದು, ಮೈಸೂರು ದಿಗಂತ ಪ್ರಶಸ್ತಿ-೨೦೧೪ ಎಂದು ದಾಖಲಿಸಿ, ಅದರ ಜೊತೆಗೆ ಮಾನವೀಯ ಸಮಸ್ಯೆಗಳಿಗೆ ಸಂಬಂಧಪಟ್ಟ ಒಂದು ಲೇಖನವನ್ನು ಮಾತ್ರ ಕಳುಹಿಸಬೇಕು. ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರರ್ಕರು ಬರೆದಿರುವ ವರದಿ, ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶವಿದ್ದು, ಲೇಖನ, ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ಧೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.
  ಲೇಖನ ವರದಿಗಳನ್ನು ಫೆ.೨೮ ರೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಅಭಿಮಾನಿ ಪ್ರಶಸ್ತಿ-೨೦೧೪ ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ||ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-೫೬೦೦೦೧. ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ .
Please follow and like us:
error