ಶರಣ ಹುಣ್ಣಿಮೆ.

ಕೊಪ್ಪಳ, ವಿಶ್ವಗುರುಬಸವೇಶ್ವರ ಟ್ರಸ್ಟ್ ಕೊಪ್ಪಳ ಮಾಸಿಕ ಕಾರ್ಯಕ್ರಮವಾದ ೫೯ನೇ ಶರಣಹುಣ್ಣಿಮೆ  ಕಾರ್ಯಕ್ರಮವು ನಗರದ  ಹುಡ್ಕೋ ಕಾಲನಿಯಲ್ಲಿ ದಿನಾಂಕ ೩೧-೦೭-೨೦೧೫ರಂದು ಶುಕ್ರವಾರ  ಸಂಜೆ  ೬-೩೦ಕ್ಕೆ  ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಶ್ರೀ ಚಂದ್ರಪ್ಪ ಮುದ್ದಿ, ಅಭಿವೃದ್ಧಿ ಅಧಿಕಾರಿಗಳು ಎಲ್.ಐ.ಸಿ. ಕೊಪ್ಪಳ  ಇವರು ವಹಿಸಲಿದ್ದಾರೆ.  ಮುಖ್ಯ ಅತಿಥಿ  ಉಪನ್ಯಾಸಕರಾಗಿ ಶ್ರೀ ಮಾನಪ್ಪ  ಬೆಲ್ಲದ, ಶಿಕ್ಷಕರು, ಸರಕಾರಿ ಪ್ರಾಥಮಿಕ ಶಾಲಾ ಬಸಾಪಟ್ಟಣ ಇವರು ಆಗಮಿಸಿ ವಚನಗಳಲ್ಲಿ ವ್ಯಕ್ತಿತ್ವ  ವಿಕಸನ  ವಿಷಯ ಕುರಿತು ಮಾತನಾಡಲಿದ್ದಾರೆ.  ಅತಿಥಿಗಳಾಗಿ  ದೇವೀಶ್ ಗಬ್ಬೂರ, ಕಿರ್ಲೊಸ್ಕರ್ ಕಾರ್ಮಿಕರು, ಕೊಪ್ಪಳ ಇವರು ಆಗಮಿಸಲಿದ್ದಾರೆ.  ಶ್ರೀ ಬಸವಯ್ಯ  ಸಸಿಮಠ  ಇವರು ಪ್ರಸಾದ ದಾಸೋಹ ವಹಿಸಿಕೊಂಡಿದ್ದಾರೆ.  ಈ  ಕಾರ್ಯಕ್ರಮಕ್ಕೆ  ಸರ್ವರಿಗೂ  ಸ್ವಾಗತ ಕೋರಲಾಗಿದೆ ಎಂದು ಟ್ರಸ್ಟ್  ಕಾರ್ಯದರ್ಶಿ ರಾಜೇಶ  ಸಸಿಮಠ ತಿಳಿಸಿದ್ದಾರೆ. 
Please follow and like us:
error