ಇಬ್ಬರು ರಾಜಕಾರಣಿಗಳಿಗೆ ಪ್ರಾಣ ಕಂಟಕ: ಶ್ರೀರಾಮುಲು ಗೆಲವು- ಕೋಡಿ ಮಠ ಶ್ರೀ ಭವಿಷ್ಯ

ಗದಗ: ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ರಾಜಕೀಯದಲ್ಲಿ ಹಿರಿಯ ರಾಜಕಾರಣಿಗಳಿಬ್ಬರು ದುರ್ಮರಣಕ್ಕೆ ಈಡಾಗುವ ಸಾಧ್ಯತೆ ಇದೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಹಾ ಸಂಸ್ಥಾನದ ಜ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಅವರು ಶನಿವಾರ ಬೆಳಗ್ಗೆ ಗದುಗಿಗೆ ಭಕ್ತರ ಮನೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯವಿಂದು ತತ್ವ ಸಿದ್ಧಾಂತಗಳನ್ನು ಕಳೆದುಕೊಳ್ಳುತ್ತಿದೆ. ನ್ಯಾಯ, ನೀತಿ, ಧರ್ಮ, ತತ್ವ, ಸಿದ್ಧಾಂತಗಳು, ಕರ್ತವ್ಯ ನಿಷ್ಠೆ, ನೈತಿಕತೆ ಇಲ್ಲದ ರಾಜಕಾರಣ ನಡೆಯುತ್ತಿದೆ.
ಅನ್ಯ ಮಾರ್ಗ, ಅನೀತಿ, ಅಧರ್ಮದಿಂದ ನಡೆದುಕೊಂಡವರಿಗೆ ತಕ್ಕ ಪಾಠ, ಶಾಸ್ತಿ ಶತಸಿದ್ಧ ಎಂಬುದನ್ನು ನಾವಿಂದು ಕೇಂದ್ರ ಮತ್ತು ರಾಜ್ಯದ ರಾಜಕೀಯದ ಇತ್ತೀಚಿನ ಹಲ ಪ್ರಕರಣ, ಘಟನೆಗಳಿಂದ ತಿಳಿಯಬಹುದು ಎಂದರು. ಸತ್ಯ ಕಹಿಯಾಗಿರುತ್ತದೆ. ಸುಳ್ಳು, ವಂಚನೆ ಕ್ಷಣಿಕ ಸುಖ ಕೊಟ್ಟರೂ ಅದರಿಂದ ಮುಂದೆ ದೊಡ್ಡ ನೋವು ಅನುಭವಿಸಬೇಕು.
ದೇಶದ, ರಾಜ್ಯದ ಹಿತ ದೃಷ್ಟಿಯಿಂದ ಜನಕಲ್ಯಾಣದ ದೃಷ್ಟಿಯನ್ನಿಟ್ಟುಕೊಂಡು ಕೆಲವು ಮುನ್ಸೂ ಚನೆ ನೀಡಿದಾಗ ನನ್ನನ್ನು ಎಷ್ಟೋ ರಾಜಕಾರಣಿಗಳು ಟೀಕಿಸಿದರು. ಅವರ ಟೀಕೆಗೆ ಅವರೇ ಪೆಟ್ಟು ತಿಂದರು. ಜತೆಗೆ ಕೆಲವರು ನೋವು ಅನುಭವಿಸುವುದನ್ನೂ ನಾವಿಂದು ಕಾಣಬಹುದಾಗಿದೆ ಎಂದು ಹೇಳಿದರು.
ಶ್ರೀರಾಮುಲು ಗೆಲವು: ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ರುವ ಮಾಜಿ ಸಚಿವ ಶ್ರೀರಾಮುಲು ವಿಜಯಿಯಾಗಲಿದ್ದಾರೆ. ಅನುಕಂಪದ ಅಲೆ ಅವರ ಕೈ ಹಿಡಿಯಲಿದೆ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

Leave a Reply