ರೈತರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಸರ್ಕಾರದ ಗಮನಕ್ಕೆ ತರುವೇನು-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ:೨೮, ನಗರದ ಶಾಸಕರ ಕಾರ್ಯಲಯದ ಮುಂದೆ ಧರಣಿಕುಳಿತುಕೊಂಡ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿಯ ಮನವಿ ಸ್ವೀಕರಿಸಿ ಮಾತನಾಡಿದ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಸಣ್ಣ ಮತ್ತು ಮಧ್ಯಮ ರೈತರು ಕೃಷಿ ಸಾಲದಿಂದ ಹಾಗೂ ಬರದಿಂದ ತೀರ್ವ ತೊಂದರೆಗೊಳಗಾಗಿದ್ದಾರೆ. ಇವರ ಬೆಳೆಸಾಲ ಮನ್ನಾಮಾಡಿ ಶೀಘ್ರವೇ ಸರ್ಕಾರದಿಂದ ಬೆಳೆ ಪರಿಹಾರವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೇನು ಎಂದು ಹೇಳಿದರು.ಈ ಸಂದರ್ಭದಲ್ಲಿ ಹುಸ್ಸೇನ್ ಪೀರಾ ಚಿಕಿನ್, ಮಾನ್ವಿಪಾಷಾ, ರಾಜ್ಯಧ್ಯಕ್ಷರಾದ ಡಿ.ಹೆಚ್.ಪುಜಾರ, ರಾಜ್ಯಕಾರ್ಯದರ್ಶಿ ನಿರ್ವಾಣಪ್ಪ, ಜಿಲ್ಲಾ ರೈತ ಸಮಿತಿ ಅಧ್ಯಕ್ಷರಾದ ಮಂಜುನಾಥ ಚಕ್ರಸಾಲಿ, ಬಸವರಾಜ ಬುನ್ನಟ್ಟಿ, ಬಸವರಾಜ ನರೇಗಲ್, ಇನ್ನೂ ಅನೇಕ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Please follow and like us:
error