ಗಣೇಶೋತ್ಸವ ಸಮಾಜಮುಖಿಯಾಗಲಿ- ಪ್ರಹ್ಲಾದ ಅಗಳಿ.

ಕೊಪ್ಪಳ-21- ಪ್ರತಿ ಬರುವ ಗಣೇಶ ಹಬ್ಬ ಕೇವಲ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಗಣೇಶ ಪ್ರತಿಷ್ಠಾಪನೆಯ ಹೆಸರಿನಲ್ಲಿ ಮೋಜು ಮಸ್ತಿ ಮಾಡದೇ, ಗಣೇಶೋತ್ಸವವನ್ನು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡುವಂತೆ ಮಾಡಬೇಕು ಎಂದು ಭಾಗ್ಯನಗರದ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಪ್ರಹ್ಲಾದ ಅಗಳಿ ಹೇಳಿದರು.
          ತಾಲೂಕಿನ ಭಾಗ್ಯನಗರದ ಶ್ರೀ ಬಾಲವಿನಾಯಕ ಗ್ರಾಮೀಣ ಅಭಿವೃದ್ಧಿ ಯುವ ಸಂಘವು ಗಣೇಶ ಪ್ರತಿಷ್ಠಾಪನೆಯ ಪ್ರಯುಕ್ತ ಭಾನುವಾರ ಆಯೋಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು ೨೧ ವರ್ಷಗಳಿಂದ ಗಣೇಶ ಪ್ರತಿಷ್ಠಾಪನೆ ಮಾಡುತ್ತಾ ಬಂದಿರುವ ಈ ಸಂಘವು ಈವರೆಗೆ ಯಾವುದೇ ತಕರಾರು ಮಾಡಿಕೊಳ್ಳದೇ ಮಾದರಿ ಸಂಘವಾಗಿದೆ ಎಂದರು.
           ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ಬಸವರಾಜ ಕರುಗಲ್ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಬರಗಾಲಕ್ಕೆ ತತ್ತರಿಸಿದ್ದ ರಾಜ್ಯ, ಮತ್ತು ಆತ್ಮಹತ್ಯೆಯ ಹಾದಿ ಹಿಡಿದಿರುವ ಅನ್ನದಾತ ಸಂಕಷ್ಟ ಎದುರಿಸುವಂತಾಗಿತ್ತು. ವಿನಾಯಕನ ಹಬ್ಬ ಸಮೀಪಿಸುತ್ತಿದ್ದಂತೆ ಮಳೆ ಇಲ್ಲ ಎನ್ನುವ ವಿಘ್ನ ದೂರವಾಗಿದೆ. ಹಿಂಗಾರು ಮಳೆ ಕಂಡ ಅನ್ನದಾತ ಖುಷಿಯಾಗಿದ್ದಾನೆ. ಗಣೇಶೋತ್ಸವ ಸಂಭ್ರಮವನ್ನು ಉಂಟು ಮಾಡಬೇಕೇ ಹೊರತು ಸಂ
         ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ, ಯುವಸಂಘಗಳು ಕೇವಲ ಗಣೇಶೋತ್ಸವಕ್ಕೆ ಸೀಮಿತವಾಗದೇ, ಸಮಾಜಪರ ಕೆಲಸಗಳನ್ನು ಮಾಡುವಂತಾಗಬೇಕು. ಈ ಸಂಘವು ಸ್ವಚ್ಛತಾ ಆಂದೋಲನಕ್ಕೆ ಮುಂದಾಗಲಿ. ಆ ಮೂಲಕ ಇಡೀ ಗ್ರಾಮ ಸ್ವಚ್ಛವಾಗುವಂತೆ ಕಾರ್ಯ ನಿರ್ವಹಿಸಲು. ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ಪೂರೈಸುವುದಾಗಿ ಘೋಷಿಸಿದರು.
           ಈ ಸಂದರ್ಭದಲ್ಲಿ ತಾಪಂ ಸದಸ್ಯ ಶ್ರೀನಿವಾಸ ಹ್ಯಾಟಿ, ಸುರೇಶ ದರಗದಕಟ್ಟಿ, ಉದಯ ಹೊಟ್ಟಿ, ಏಕನಾಥಪ್ಪ ದೇವದುರ್ಗ, ಮಲ್ಲಿಕಾರ್ಜುನ ಹನಸಿ, ಹನುಮಂತಪ್ಪ ನೇಮಣ್ಣ ಬಿದರೂರು, ಗಂಗಾಧರ ನೇವಾರ, ಅನಿಲ್ ಬಾಚನಹಳ್ಳಿ ಇತರರು ಇದ್ದರು.
          ಸಂಘದ ವತಿಯಿಂದ ನಡೆಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.

ಕಟವನ್ನಲ್ಲ ಎಂದರು.

Please follow and like us:
error