You are here
Home > Koppal News > ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ಭರಮಪ್ಪ ಕಟ್ಟಿಮನಿಯವರಿಗೆ ಸನ್ಮಾನ

ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ಭರಮಪ್ಪ ಕಟ್ಟಿಮನಿಯವರಿಗೆ ಸನ್ಮಾನ

ಕೊಪ್ಪಳ: ಸಿ.ಪಿ.ಎಸ್.ಶಾಲೆಯ ಶಿಕ್ಷಕರು ಹಾಗೂ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿಯವರನ್ನು ಶಿರಹಟ್ಟಿ ತಾಲೂಕಿನ ಶಿಗ್ಲಿಯಲ್ಲಿ ಮಂಗಳವಾರ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಧಾನ ಸಮಾರಂಭದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಕೃಷ್ಣ ದೊಡ್ಡಮನಿಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಟಿ.ಈಶ್ವರ,ರಾಜ್ಯ ನೂಲಿನ ಗಿರಿಣಿಗಳ ಮಹಾಮಂಡಳ ನಿರ್ದೇಶಕರಾದ ಎಸ್.ಪಿ.ಬಳಿಗಾರ,ಗದಗ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಮ್.ಎಸ್.ದೊಡ್ಡಗೌಡ್ರ,ಜಿ.ಪಂ.ಸದಸ್ಯರಾದ ಸುರೇಶ ಬರದೂರ,ಶಿರಹಟ್ಟಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್.ಬುರಡಿ,ಬಿ.ಆರ್.ಸಿ.ಜೆ.ಬಿ.ಗುಡಿ,ಆರ್.ಎಂ.ಶಿರಹಟ್ಟಿ ಮುಂತಾದವರು ಹಾಜರಿದ್ದರು.

Leave a Reply

Top