ಪುಸ್ತಕ ಖರೀದಿಸಲು ನಗರಸಭೆಯಿಂದ ಸಹಾಯಧನ

 ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿಗೆ ನಗರಸಭೆ ನಿಧಿ ಹಾಗೂ ಎಸ್.ಎಫ್.ಸಿ. ಶೇ.೨೨.೭೫ ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಎಲ್.ಎಲ್.ಬಿ. ಪದವಿ ಹೊಂದಿದ್ದು, ವೃತ್ತಿ ನಿರತ ವಕೀಲರುಗಳಿಗೆ ಪುಸ್ತಕ ಖರೀದಿಸಲು ಸಹಾಯಧನ (ಅಂದಾಜು ೧,೦೦,೦೦೦/-) ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 
ಈ ಸಹಾಯಧನದ ಲಾಭವನ್ನು ಪಡೆಯಲಿಚ್ಚಿಸುವವರು ಈ ಕೆಳಕಾಣಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಮನವಿಯೊಂದಿಗೆ ಸಲ್ಲಿಸುವುದು ಹಾಗೂ ನಿಯಮಗಳನ್ವಯ ಪಾಲಿಸುವುದು. 
ಅರ್ಜಿ ಸಲ್ಲಿಸಲು ಸೆ.೧೦ ಕೊನೆಯ ದಿನವಾಗಿದ್ದು, ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಶೈಕ್ಷಣಿಕ ಅರ್ಹತೆಯ ದಾಖಲೆಗಳು (ಎಲ್.ಎಲ್.ಬಿ.) ಪ್ರಮಾಣ ಪತ್ರಗಳು, ವಕೀಲ ವೃತ್ತಿನಿರತರಾಗಿರುವ ಬಗ್ಗೆ ಸಮರ್ಥನೀಯ ದಾಖಲೆಗಳು (ಬಾರ್ ಅಸೋಸಿಯೇಷನ್ ಮುಖಾಂತರ), ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿಯ ಸಂಪೂರ್ಣ ಝರಾಕ್ಸ ಪ್ರತಿ, ಇತ್ತೀಚಿನ ೦೩ ಭಾವಚಿತ್ರಗಳು, ಚಾಲ್ತಿ ಸಾಲಿನ ಆಸ್ತಿಕರ ಪಾವತಿ ಮಾಡಿದ ರಶೀದಿ ಹಾಗೂ ನಮೂನೆ-೩ ರ ಪ್ರತಿಗಳು, ಗುರುತಿನ ಚೀಟಿ/ಆಧಾರ ಕಾರ್ಡ್ ಸಲ್ಲಿಸಬಹುದಾಗಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಾದಲ್ಲಿ ನಗರಸಭೆ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Leave a Reply