ಕೊಪ್ಪಳ ಜಿಲ್ಲಾ ಮೋಚಿ ಸಮಾಜದ ನೌಕರರ ಘಟಕ ಉದ್ಘಾಟನೆ

ದಿನಾಂಕ : ೨೪-೦೩-೨೦೧೩ ರಂದು ಭಾಗ್ಯನಗರ ಗ್ರಾಮದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ಕೊಪ್ಪಳ ಜಿಲ್ಲಾ ಮೋಚಿ ಸಮಾಜದ ನೌಕರರ ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಿ ಘಟಕವನ್ನು ಉದ್ಘಾಟಿಸಲಾಯಿತು.   ಉದ್ಘಾಟನೆಯನ್ನು ಸಮಾಜದ ಹಿರಿಯರಾದ ಯಲ್ಲಪ್ಪ ಪಡಸಾಲಿಮನಿಯವರು ಉದ್ಘಾಟಿಸಿದರು.  ಅಧ್ಯಕ್ಷತೆಯನ್ನು ಜಿಲ್ಲಾ ಮೋಚಿ ಸಮಾಜದ ಜಿಲ್ಲಾಧ್ಯಕ್ಷರಾದ ದಾನಪ್ಪ ಜಿ. ಕವಲೂರ ಅವರು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಘಟಕದ & ತಾಲೂಕ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.  ನೌಕರರ ಘಟಕದ ನೂತನ ಪದಾಧಿಕಾರಿಕಗಳಾದ ಮಂಜುನಾಥ ಪೂಜಾರ ಅಧ್ಯಕ್ಷರು, ಮಲ್ಲೇಶಪ್ಪ ಅಡ್ಡೇದಾರ ಉಪಾಧ್ಯಕ್ಷರು, ಹೇಮಣ್ಣ ಕವಲೂರ ಪ್ರಧಾನ ಕಾರ್ಯದರ್ಶಿ, ವೀರೇಶ ಹುಲ್ಲೂರು ಸಂಘಟನಾ ಕಾರ್ಯದರ್ಶಿ, ಶಾಂತಾ ಅಳವಂಡಿ ಖಜಾಂಚಿ & ಮಹೇಶ್ವರಿ ಅಳವಂಡಿ, ರೇಣುಕಾಪ್ರಸಾದ ಇಟಗಿ, ಹನುಮಂತಪ್ಪ ಹುನಗುಂದ, ವೆಂಕಟೇಶ ಕಂದಗಲ್ಲ, ಈರಣ್ಣ ಹುನಗುಂದ, ಫಕೀರಪ್ಪ ಹುನಗುಂದ, ಹೇಮಣ್ಣ ಕಲ್ಮನಿ,  ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.  
ಕಾರ್ಯಕ್ರಮದ ಸ್ವಾಗತವನ್ನು ಶೇಖರಪ್ಪ ಮಂಗಳೂರು ಶಿಕ್ಷಕರು, ಪ್ರಸ್ಥಾವಿಕ ನುಡಿ ಮಲ್ಲೇಶಪ್ಪ ಅಡ್ಡೇದಾರ ಶಿಕ್ಷಕರು, ವಿರೇಶ ಹುಲ್ಲೂರ ಶಿಕ್ಷಕರು ನಿರೂಪಿಸಿ ವಂದಿಸಿದರು.  
Please follow and like us:
error