fbpx

ಬಡತನ ಮನುಷ್ಯನ ಶತ್ರು, ಜಾತಿ ಅಲ್ಲ-ಎ.ವಿ.ಕಣವಿ.

ಕೊಪ್ಪಳ- ೨೦, ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವಗಾಂದಿಯವರ ೭೧ನೇ ಜನ್ಮದಿನಾಚಾರಣೆ ಹಾಗೂ ನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ರವರ ಜನ್ಮಶತಮಾನೋತ್ಸವ ಆಚರಣೆ ಅಂಗವಾಗಿ ಮಾತನಾಡಿದ ಎ.ವಿ.ಕಣವಿಯವರು ಈ ಇಬ್ಬರೂ ದೇಶ ಹಾಗೂ ನಾಡು ಕಂಡ ಅಪ್ರತೀಮ ನಾಯಕರು ದಿವಂಗತ ಡಿ.ದೇವರಾಜ ಅರಸುರವರು ಇಂದಿರಾ ಗಾಂದಿಯವರು ಜಾರಿಗೆ ತಂದ ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ ಮೊದಲ ಮುಖ್ಯಮಂತ್ರಿ ಇವರು ಭೂ-ಸುದಾರಣೆ ಕಾಯ್ದೆ, ಜೀತಪದ್ದತಿ ನಿರ್ಮೋಲನೆ ಮಲಹೋರುವ ಅನಿಷ್ಟ ಪದ್ದತಿಗಳನ್ನು ನಿಷೇದಿಸಿ ೧೭ ಸಾವಿರ ಮಲಹೋರುವ ಕಾರ್ಮಿಕರನ್ನು ಪೌರ ಕಾರ್ಮಿಕರಾಗಿ ನೇಮಕ ಮಾಡಿದರು. ಬಡವರ ಹಿಂದುಳಿದವರ ನಿರ್ಗತೀಕರ ಧಲಿತರ ದ್ವನಿಯಾಗಿದ್ದ ಅರಸರು ಇವರ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ ಧೀಮಂತ ನಾಯಕ. ಬಡತನವೇ ಮನುಷ್ಯನ ಶತ್ರುವಾಗಿದೆ ಜಾತಿ ಅಲ್ಲ ಎಂ

ದು ದಿವಂಗತ ಅರಸು ರವರು ತಮ್ಮ ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯದರ್ಶಿ ಅರ್ಜುನ ಸಾ ಖಾಟವಾ ರವರು ಈ ಇಬ್ಬರು ಮೇರು ನಾಯಕರ ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳು ಅಪಾರವೆಂದು ಬಣ್ಣಿಸಿದರು.  ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶಾಂತಣ್ಣ ಮುದುಗಲ್, ಕೊಪ್ಪಳ ಕುಡಾ ಅಧ್ಯಕ್ಷ ಜುಲ್ಲು ಖಾದರಿ, ಮರ್ದಾನಲಿ ಅಡ್ಡೇವಾಲೆ, ಕೆ.ಎಮ್.ಸಯ್ಯದ್, ದ್ಯಾಮಣ್ಣ ಚಿಲವಾಡಗಿ, ದಾದಾಪೇರ, ಬಸವರೆಡ್ಡೆಪ್ಪ ಹಳ್ಳಿಕೇರಿ, ಸೋಮಣ್ಣ ಬಾರಕೇರ, ಬಾಳಪ್ಪ ಬಾರಕೇರ, ಗವಿಸಿದ್ದಪ್ಪ ಮುದುಗಲ್, ಶ್ರೀಮತಿ ಶಕುಂತಲಾ ಹುಡೇಜಾಲಿ, ಇಂದಿರಾಭಾವಿ ಕಟ್ಟಿ, ಮಾನ್ವಿಪಾಷಾ, ಮುನಿರ್ ಸಿದ್ದಕಿ, ಮಂಜುನಾಥ ಗಾಳಿ, ಅಜ್ಜಪ್ಪ ಸ್ವಾಮಿ, ನೂರಜಾನ್ ಬೇಗಂ, ನೀಲಮ್ಮ, ಚನ್ನಮ್ಮ, ಮಂಜುಳಾ ಹಾದಿಮನಿ, ಉಪಸ್ಥಿತರಿದ್ದು ಶಿವಾನಂದ ಹೂದ್ಲೂರು ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ವಕ್ತಾರ ಅಕ್ಬರ ಪಾಷಾ ಪಲ್ಟನ ವಂದಿಸಿದರು.

Please follow and like us:
error

Leave a Reply

error: Content is protected !!