ಯಲಬುರ್ಗಾ : ಎಲ್ಲ ನಾಮಪತ್ರ ಕ್ರಮಬದ್ಧ

 ಯಲಬುರ್ಗಾ ವಿಧಾನಸಭಾ ಕ್ಷೇತ್ರ ಚುನಾವಣೆಗೆ ೧೬ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ ೨೯ ನಾಮಪತ್ರಗಳನ್ನು ಪರಿಶೀಲಿಸಿದ ನಂತರ ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂಬುದಾಗಿ ಕ್ಷೇತ್ರ ಚುನಾವಣಾಧಿಕಾರಿ ದೊರೈಸ್ವಾಮಿ  ಅವರು ತಿಳಿಸಿದ್ದಾರೆ.
  ನಾಮಪತ್ರಗಳ ಪರಿಶೀಲನೆ ಏ. ೧೮ ರಂದು ನಡೆಸಿಲಾಗಿದ್ದು, ಅಂದು ೧೪ ಅಭ್ಯರ್ಥಿಗಳ ನಾಮಪತ್ರಗಳನ್ನು ಕ್ರಮಬದ್ಧವಾಗಿವೆ ಎಂಬುದಾಗಿ ಘೋಷಿಸಲಾಗಿತ್ತು.  ಆದರೆ ದ್ಯಾಮಣ್ಣ ಶಂಕ್ರಪ್ಪ ಜಮಖಂಡಿ ಹಾಗೂ ನಾಗಪ್ಪ ಶಾಂತಪ್ಪ ಕೊಳಜಿ ಈ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳ ಬಗ್ಗೆ ಲಿಖಿತ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ, ನಾಮಪತ್ರ ಪರಿಶೀಲನೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.  ಶುಕ್ರವಾರ ನಡೆಸಿದ ನಾಮಪತ್ರ ಪರಿಶೀಲನೆಯ ನಂತರ ಈ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರವನ್ನು ಸಹ ಕ್ರಮಬದ್ಧವಾಗಿವೆ ಎಂದು ಘೋಷಿಸಲಾಯಿತು.  ಇದರಿಂದಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಎಲ್ಲ ೧೬ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಕ್ಷೇತ್ರ ಚುನಾವಣಾಧಿಕಾರಿ ದೊರೈಸ್ವಾಮಿ  ತಿಳಿಸಿದ್ದಾರೆ.

Related posts

Leave a Comment