ಹೊಸಪೇಟೆಯಲ್ಲಿ ಶೀಘ್ರದಲ್ಲಿಯೇ ’ಸುವರ್ಣ ಲೇಡಿಸ್ ಕ್ಲಬ್’

ಹೊಸಪೇಟೆ-ಸುವರ್ಣ ವಾಹಿನಿಯು ಮಹಿಳೆಯರಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಪ್ರಪ್ರಥಮ ಚಾನಲ್ ಆಗಿದ್ದು ’ಸುವರ್ಣ ಲೇಡಿಸ್ ಕ್ಲಬ್’ ಹೆಸರಿನಡಿಯಲ್ಲಿ ಪ್ರತಿಯೊಬ್ಬ ಮಹಿಳೆಗೂ ವೇದಿಕೆಯನ್ನು ಒದಗಿಸುತ್ತಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬ ಮಹಿಳೆಯು ಪಡೆಯುವಂತಾಗಬೇಕು ಎಂದು  ವಾಹಿನಿಯ ಸಹಾಯಕ ವ್ಯವಸ್ಥಾಪಕ ಕೆ.ಬಿವೈದ್ಯ ತಿಳಿಸಿದರು.
ಅವರು ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವೀಲ್ ಕ್ಲಬ್ ಆಯೋಜಿ ಸಿದ್ದ ಇಂಟರ್ ಕ್ಲಬ್ ಮೀಟ್‌ನಲ್ಲಿ ಮಾತನಾಡುತ್ತಾ ಹೊಸಪೇಟೆ ಯಲ್ಲಿ ಸುವರ್ಣ ಲೇಡಿಸ್ ಕ್ಲಬ್‌ನನ್ನು ಆರಂಭಿಸುವ ಇಚ್ಚೆಯಿದ್ದು   ಪ್ರಸ್ತುತ ದೇಶದಲ್ಲಿ ಸುಮಾರು ೭೦೦ ವಾಹಿನಿಗಳಿದ್ದು ,ಸಾಮಾನ್ಯ ಮಹಿಳೆಯರಿಗಾಗಿ ಯಾವುದೇ ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ, ಮಹಿಳೆಯಲ್ಲಿ ಅಡಗಿರುವ ಸೂಪ್ತ ಕಲೆಗೆ ಸುವರ್ಣ ವಾಹಿನಿಯೂ ಅದ್ಭುತ ವೇದಿಕೆಯನ್ನು  ಕಳೆದ ಐದು ವರ್ಷಗಳಿಂದ ಒದಗಿಸುತ್ತಿದ್ದು ನೃತ್ಯ, ರೂಪಕ, ಕೋಲಾಟ, ಹೀಗೆ ಹಲವಾರು ಕಾರ್ಯ ಕ್ರಮಗಳನ್ನು ಮಹಿಳೆಯರು ನೀಡುತ್ತಿದ್ದು ಪ್ರತಿ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ. ಹೊಸಪೇಟೆ  ಮಹಿಳೆಯರು   ಸದುಪಯೋಗ ಪಡಿಸಿಕೊಳ್ಳಲಿ ಎಂದು ಆಶಿಸಿದರು. 
   ಇತರೆ ಯಾವುದೇ ಸಂಘ ಸಂಸ್ಥೆಗಳ ಸದಸ್ಯರು ಇದರ ಸದಸ್ಯರಾಗಬಹುದು, ಇದಕ್ಕೆ ಯಾವುದೇ ನಿರ್ಬಂಧವಿಲ್ಲ, ಸದಸ್ಯತ್ವಕ್ಕೆ   ವಯೋಮಾನದ ಗಡುವಿಲ್ಲ, ಈಗಾಗಲೇ ಸುಮಾರು ೩೫ ಸಾವಿರ ಮಹಿಳೆಯರು ಸದಸ್ಯತ್ವವನ್ನು ಪಡೆದಿದ್ದು ೧೧ ಜಿಲ್ಲೆಗಳಲ್ಲಿ ಕ್ಲಬ್ ಅತ್ಯಂತ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ, ಸದಸ್ಯತ್ವ ಪಡೆದ ಮಹಿಳೆಯರಿಗೆ ಸುವರ್ಣ ವಾಹಿನಿಯ ಎಲ್ಲಾ ಕಾರ್ಯಕ್ರಮಗಳನ್ನು ಪ್ರತ್ಯೇಕ್ಷ ವಾಗಿ ವೀಕ್ಷಿಸಬಹುದು  ಎಂದರು.
ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ನಂದಿನಿ ಚಿಕ್ಕಮಠ್,ಮಾಜಿ ಅಧ್ಯಕ್ಷೆ  ವಿದ್ಯಾ ಸಿಂಧಗಿ, ಕಾರ್ಯದರ್ಶಿ ರೇಖಾಪ್ರಕಾಶ್, ಗದಗಿನ ಸುವರ್ಣ ಲೇಡಿಸ್ ಕ್ಲಬ್‌ನ ಅಧ್ಯಕ್ಷೆ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಸದಸ್ಯರು, ವಾಸವಿ ಮಹಿಳಾ ಮಂಡಳಿ, ಬೇಡ ಜಂಗಮ ಮಹಿಳಾ ಘಟಕ, ಕಿರ್ಲೋಸ್ಕರ್ ಲೇಡಿಸ್ ಕ್ಲಬ್‌ನ ಸದಸ್ಯರಗಳು ವಾಹಿನಿಯ ವ್ಯವಸ್ಥಾಪಕರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದರು. ಡಾ| ಮಾಧವಿ ದೇವಿ ನಿರ್ವಹಿಸಿದರು, ಜಯಶ್ರೀ ರಾಜಗೋಪಾಲ ಪ್ರಾರ್ಥಿಸಿದರು.
Please follow and like us:

Leave a Reply