ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು ಸಿದ್ದರಾಮಯ್ಯನವರ ಸರ್ಕಾರ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ- ೦೫, ಕ್ಷೇತ್ರದ ಹಿರೇಸಿಂದೋಗಿ ಗ್ರಾಮ ಪಂಚಾಯತಿಯ ಗ್ರಾಮಗಳಾದ ಕಾತರಕಿ-ಗುಡ್ಲಾನೂರು, ಬುದಿಹಾಳ, ಡಂಬರಹಳ್ಳಿ, ಬಿಸರಹಳ್ಳಿ, ಬಿಕನಹಳ್ಳಿ, ಮೈನಹಳ್ಳಿ ಗ್ರಾಮಗಳಲ್ಲಿ ರೂ.೮೪ ಲಕ್ಷದ ವಿವಿಧ ಯೋಜನೆಯ ಅಡಿಯಲ್ಲಿ ಸಮುದಾಯ ಭವನಗಳನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಕೊಪ್ಪಳ ಕ್ಷೇತ್ರಕ್ಕೆ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದು ಇದರಿಂದ ಕ್ಷೇತ್ರದ ಅಭಿವೃದ್ಧಿ ಸಹಾಯಕವಾಗುತ್ತಿದೆ. ಹಿಂದಿನ ಸರಕಾರ ವೈದ್ಯಕೀಯ ಕಾಲೇಜಿಗೆ ಕೇವಲ ರೂ. ೭ ಕೋಟಿ ನೀಡಿದ್ದು ಕಾಂಗ್ರೆಸ್ ಸರಕಾರವು ರೂ. ೧೩೦ ಕೋಟಿ ಹಣವನ್ನು ಮಂಜೂರು ಮಾಡಿದೆ. ಸಿಂಗಟಾಲೂರು ಏತ ನೀರಾವರಿ ಬಗ್ಗೆ ಮಾತನಾಡಿದ ಹಿಂದಿನ ಬಿ.ಜೆ.ಪಿ ಸರಕಾರವು ಯಾವುದೇ ಅನುದಾನವನ್ನು ನೀಡಿರುವುದಿಲ್ಲ. ಆದರೆ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳು ಈಗಾಗಲೇ ರೂ. ೯೦.೩೮ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು ಮುಂಬರುವ ಅಕ್ಟೋಬರ್-ಡಿಸೆಂಬರ್ ತಿಂಗಳುಗಳಲ್ಲಿ ಬೆಟಗೇರಿ ಮತ್ತು ಅಳವಂಡಿ ಏತ ನೀರಾವರಿಯ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ಕ್ಷೇತ್ರದ ೪೦ ಗ್ರಾಮಗಳಲ್ಲಿ ಸಮುದಾಯ ಭವನಗಳು ನಿರ್ಮಾಣ ಗೊಂಡಿವೆ. ಇದೇ ತಿಂಗಳು ರೂ.೭.೫ ಕೋಟಿಯ ಯತ್ನಟ್ಟಿ ಸೇತುವೆ ಹಾಗೂ ಕೋಳೂರಿನ ರೂ.೫ ಕೋಟಿಯ ಬ್ರಿಜ್ ಕಮ್ ಬ್ಯಾರೇಜ್ ಲೋಕಾರ್ಪಣೆ ಗೊಳ್ಳಲಿವೆ. ಶೀಘ್ರದಲ್ಲಿಯೇ ಹಿರೇಸಿಂದೋಗಿ ಹಾಗೂ ಬುದಿಹಾಳ ನಡುವೆ ಅಂತರಜಲ ಹೆಚ್ಚಿಸಲು ಇನ್ನೂಂದು ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ನನ್ನ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚು ಆಧ್ಯತೆಯನ್ನು ನೀಡುವೆನು. ಪ್ರತಿ ಗ್ರಾಮಕ್ಕೆ ಮೂಲ ಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣಮಾಡಲಾಗುವುದು. ರೂ.೧೦ ಕೋಟಿ ಮೊತ್ತದ ಅಡಿಯಲ್ಲಿ ಕೊಪ್ಪಳ ನಗರದ ಬಸವೇಶ್ವರ ವೃತ್ತದಿಂದ ಗವಿಮಠ ರಸ್ತೆಯ ಮೂಲಕ ಸಿಂದೋಗಿ ರಸ್ತೆಯವರೆಗೆ ವಿಭಜನೆ ಮಾಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ ಗ್ರಾ.ಪಂ ಅದ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಮಂಜಪ್ಪನವರು, ಹೆಚ್.ಎಲ್.ಹಿರೇಗೌಡ್ರು, ಕೆ.ಎಮ್.ಎಫ್ ಅಧ್ಯಕ್ಷರಾದ ವೆಂಕನಗೌಡ್ರು ಹಿರೇಗೌಡ್ರು, ಈಶಪ್ಪ ಮಾದಿನೂರು, ಶಿವಣ್ಣ ಶಹಪೂರ, ಗಾಳೆಪ್ಪ ಪೂಜಾರ, ಕೃಷ್ಣ ಗಲಿಬಿ, ಬಸವನಗೌಡ ಕರಡ್ಡಿ, ಯಲ್ಲಪ್ಪ ಮಾಲಿಪಾಟೀಲ, ಮಹೇಂದ್ರ ಗೌಡ್ರು, ಚಾಂದಸಾಬ್, ಮುನಿರಾಬಾದ್, ತಾಲೂಕು ಪಂಚಾಯತಿ ಇ.ಯೋ. ಕೃಷ್ಣಮೂರ್ತಿ, ಅಭಿಯಂತರರಾದ ಪೋಬಲನ್, ಪ್ರಬಾರಿ ಶಿಕ್ಷಣ ಕ್ಷೇತ್ರ ಅಧಿಕಾರಿಗಳು, ಸಿ.ಡಿ.ಪಿ.ಯೋ ಅಧಿಕಾರಿ ಶ್ರೀಮತಿ ಮಂದಾಕಿನಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error