ಉಚಿತ ಬೈಸಿಕಲ್ ವಿತರಣೆ.

ಕೊಪ್ಪಳ-15- ತಾಲೂಕಿನ ಹೊಸಬಂಡಿ ಹರ್ಲಾಪೂರ ಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡಲಾಯಿತು.
    ಈ ಕಾರ್ಯಕ್ರಮದಲ್ಲಿ ವಾಣಿಜ್ಯೋಧಮಿಗಳಾದ ಚಂದ್ರಶೇಖರ ಶ್ರೇಷ್ಠಿಯವರು  ಮುಂದುವರೆದು ಮಾತನಾಡಿದ ಅವರು ರಾಜ್ಯ ಸರಕಾರದಿಂದ ಉಚಿತ್ ಸೈಕಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಪ್ರಜೇಗಳಾಗಬೇಕು ಎಂದು ಮಾತನಾಡಿದರು.
    ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರಾದ ರೇಣುಕಾ ಕಟಗಿ, ಉಪಾಧ್ಯಕ್ಷರಾದ ಚನ್ನಕೃಷ್ಣ, ಸದಸ್ಯರಾದ ಮಂಜುಳಾ, ಸಿದ್ದಮ್ಮ, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅಬ್ಬುಲಿಗೆಪ್ಪ, ಶಂಕರಗೌಡ, ಶಾಲೆಯ ಮುಖ್ಯೋಪಾಧ್ಯಯರಾದ ಎಸ್.ಎಸ್.ಸುಂಕದ, ಶಾಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳ ಪಾಲಕರು, ಸಮಸ್ತ ಗ್ರಾಮದ ಗುರುಹಿರಿಯರು, ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:
error