ಪುಸ್ತಕ ಬಹುಮಾನ ಯೋಜನೆ ಕೃತಿಗಳ ಆಹ್ವಾನ.

ಕೊಪ್ಪಳ,
ಅ.೧೩ (ಕ ವಾ)  ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ೨೦೧೪ನೇ ಸಾಲಿನ
ಪುಸ್ತಕ ಬಹುಮಾನ ಯೋಜನೆಯಡಿ ಜಾನಪದ ಗದ್ಯ, ಪದ್ಯ ವಿಚಾರ ವಿಮರ್ಶೆ, ಸಂಶೋಧನೆ ಹಾಗೂ
ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳನ್ನು ಆಹ್ವಾನಿಸಲಾಗಿದೆ.
    
ಪುಸ್ತಕ ಬಹುಮಾನಕ್ಕೆ ಸಲ್ಲಿಸಲಾಗುವ ಕೃತಿಯು ೨೦೧೪ ರ ಜನವರಿ ೦೧ ರಿಂದ ೨೦೧೪ ರ
ಡಿಸೆಂಬರ್ ೩೧ ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರಬೇಕು. ಕನಿಷ್ಟ ೧೫೦ ಪುಟಗಳ
ಮಿತಿಯಲ್ಲಿರಬೇಕು. ಬಯಸುವ ಬಹುಮಾನಕ್ಕೆ ಹಾಗೂ ಜಾನಪದ ಗದ್ಯ, ಪದ್ಯ ವಿಚಾರ ವಿಮರ್ಶೆ,
ಸಂಶೋಧನೆ ಹಾಗೂ ಸಂಕೀರ್ಣ ಈ ನಾಲ್ಕು ಪ್ರಕಾರಗಳಲ್ಲಿ ಯಾವುದಾದರೊಂದು ಪ್ರಕಾರದ 
ಅತ್ಯುತ್ತಮ ಜಾನಪದ ಕೃತಿಯಾಗಿರಬೇಕು. ಆಸಕ್ತ ಲೇಖಕರು, ಪ್ರಕಾಶಕರು ಅಥವಾ ಸಂಪಾದಕರು
ಕೃತಿಯ ನಾಲ್ಕು ಪ್ರತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ
ಜಾನಪದ ಅಕಾಡೆಮಿ, ೨ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-೫೬೦೦೦೨ ಇವರಿಗೆ
ಅಕ್ಟೋಬರ್ ೩೦ ರೊಳಗಾಗಿ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ
ಕಳುಹಿಸಿಕೊಡಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಕಛೇರಿ ದೂರವಾಣಿ
ಸಂಖ್ಯೆ: ೦೮೦-೨೨೨೧೫೫೦೯ ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಅ.೧೭ ರಿಂದ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಮಹಿಳಾ ಕ್ರೀಡಾಕೂಟ.
ಕೊಪ್ಪಳ,
ಅ.೧೩ (ಕ ವಾ)  ಪ್ರಸಕ್ತ ಸಾಲಿನ ರಾಜೀವ್‌ಗಾಂಧಿ ಖೇಲ್ ಅಭಿಯಾನ್ ಮಹಿಳಾ
ಕ್ರೀಡಾಕೂಟದ ಗುಂಪು ೦೧ ಮತ್ತು ೦೨ ರ ಸ್ಪರ್ಧೆಗಳನ್ನು ಅಕ್ಟೋಬರ್ ೧೭ ರಿಂದ ೧೯ ರವರೆಗೆ
ಚಿತ್ರದುರ್ಗದ ವೀರವನಿತೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
    
ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್, ಈಜು, ಹ್ಯಾಂಡ್‌ಬಾಲ್, ಹಾಕಿ, ಟೆನ್ನಿಸ್ ಮತ್ತು
ಜಿಮ್ನಾಸ್ಟಿಕ್ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಈ ರಾಜ್ಯಮಟ್ಟದ
ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ
ಜಿಲ್ಲೆಯ ಕ್ರೀಡಾಪಟುಗಳು ಅ.೧೭ ರ ಮಧ್ಯಾಹ್ನ ೦೩ ಗಂಟೆಯೊಳಗಾಗಿ ಚಿತ್ರದುರ್ಗದ ವೀರವನಿತೆ
ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಲು ಹಾಗೂ ಉದ್ಘಾಟನಾ ಸಮಾರಂಭದ ಪಥ
ಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಕ್ರೀಡಾಪಟುಗಳು
ತಮ್ಮ ಲಘು ಹಾಸಿಗೆ ಮತ್ತು ರೂಮ್ ಬೀಗದ ಕೀಗಳನ್ನು ಹಾಗೂ ಜಾತಿ ಮತ್ತು ವಯೋಮಿತಿ
ಧೃಢೀಕರಿಸುವ ದಾಖಲೆಗಳ ಜೊತೆಗೆ ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಐಎಫ್‌ಎಸ್‌ಸಿ ಕೋಡ್
ಮಾಹಿತಿಯನ್ನು ತೆಗೆದುಕೊಂಡು ಹೋಗಬೇಕು.
      ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ
ಭಾಗವಹಿಸುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದು, ಕೊಪ್ಪಳ
ಜಿಲ್ಲಾ ಕೇಂದ್ರ ಸ್ಥಾನದಿಂದ ಚಿತ್ರದುರ್ಗಕ್ಕೆ ಹೋಗಿ ಬರುವ ಸಾಮಾನ್ಯ ಬಸ್ ಪ್ರಯಾಣ
ದರವನ್ನು ನೀಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ
ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರನ್ನು ಕಛೇರಿ ಸಮಯದಲ್ಲಿ ಖುದ್ದಾಗಿ ಅಥವಾ
ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦, ಅಥವಾ ತುಕಾರಾಮ-೭೮೯೯೪೩೨೨೨೭ ನ್ನು
ಸಂಪರ್ಕಿಸಬಹುದು.
Please follow and like us:
error