ಹಿರಿಯ ಕಲಾವಿದರ ಸಾಕ್ಷ್ಯಚಿತ್ರ ಅರ್ಜಿ ಆಹ್ವಾನ.

ಕೊಪ್ಪಳ
ಫೆ. ೨೬ (ಕ ವಾ) ಕರ್ನಾಟಕ ಜಾನಪದ ಅಕಾಡೆಮಿಯು ೨೦೧೫-೧೬ ನೇ ಸಾಲಿನ
ಪರಿಶಿಷ್ಟ ಜಾತಿ ಮತ್ತು ಪರಿಶಿಟ್ಟ ಪಂಗಡದ ಹಿರಿಯ ಜಾನಪದ ಕಲಾವಿದರು, ಅಕಾಡೆಮಿ,
ರಾಜ್ಯೋತ್ಸವ, ಜಾನಪದಶ್ರೀ ಪ್ರಶಸ್ತಿ ಪಡೆದಿರುವ ಜಾನಪದ ಕಲಾವಿದರ ಸಾಕ್ಷ್ಯಚಿತ್ರ (ಆತ್ಮ
ಕಥನ) ನಿರ್ಮಾಣದ ಯೋಜನೆಯನ್ನು ಹಮ್ಮಿಕೊಂಡಿದೆ.
     ಸಾಕ್ಷ್ಯಚಿತ್ರ
ನಿರ್ಮಾಣಕ್ಕಾಗಿ ನಿರ್ದೇಶನ, ತಾಂತ್ರಿಕ ಪರಿಣಿತಿ ಹೊಂದಿರುವ ಪರಿಶಿಷ್ಟ ಜಾತಿ,
ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಂದ ತಮ್ಮ ಅನುಭವದ ಮಾಹಿತಿಗಳೊಂದಿಗೆ ಅರ್ಜಿ
ಆಹ್ವಾನಿಸಲಾಗಿದೆ.  ಅರ್ಜಿಯನ್ನು ಸಲ್ಲಿಸಲು ಮಾ. ೦೮ ಕೊನೆಯ ದಿನಾಂಕವಾಗಿರುತ್ತದೆ. 
ಅರ್ಜಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ
ಕರ್ನಾಟಕ ಜಾನಪದ ಅಕಾಡೆಮಿ ಕಚೇರಿಯಿಂದ ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಕರ್ನಾಟಕ
ಜಾನಪದ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-೦೨, ದೂರವಾಣಿ
ಸಂ: ೦೮೦-೨೨೨೧೫೫೦೯ ಕ್ಕೆ ಸಂಪರ್ಕಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್
ತಿಳಿಸಿದ್ದಾರೆ.
Please follow and like us:
error