ಶುದ್ದ ಪರಿಸರದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ-ಅಮ್ಜದ ಪಟೇಲ್

 ನಾವೆಲ್ಲ ನಮ್ಮ ಸತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿರಿಸುವ ಸಂಕಲ್ಪ ಮಾಡಿದಲ್ಲಿ

ರೋಗ ಮುಕ್ತ ಸಮಾಜ ನಿರ್ಮಾಣ ಅಸಾಧ್ಯವೆನಲ್ಲ ಎಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ನಗರದ ನಿರ್ಮಿತಿ ಕೇಂದ್ರ ಬಡಾವಣೆಯಲ್ಲಿ ಶ್ರೀಕೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ನಗರಸಭೆ ಕೊಪ್ಪಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ನಾವು ರೋಗಗಳಿಂದ ದೂರ ಇರಬಹುದಾಗಿದೆ. ನಾಗರಿಕರು ಸ್ವ ಇಚ್ಛೆಯಿಂದ ತಮ್ಮ ಮನೆ ಸುತ್ತ ಶುದ್ಧ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಅಂದಾಗ ನಮ್ಮ ವಾರ್ಡ, ನಮ್ಮ ನಗರ ರೋಗ ಮುಕ್ತವಾಗಲು ಸಾಧ್ಯ ಎಂದ ಅವರು, ಪರಿಸರ ನೈರ್ಮಲ್ಯದಿಂದ ಅನೇಕ ಸಾಂಕ್ರಾಮಿಕ ರೋಗಗಳು ಬರುವುದರಿಂದ ಚಿಕ್ಕಮಕ್ಕಳು, ವೃದ್ಧರು ಬಹುಬೇಗ ರೋಗಗಳಿಗೆ ತುತ್ತಾಗುತ್ತಿರುವುದು ಪರಿಸರ ನೈರ್ಮಲ್ಯವೇ ಮೂಲ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಲಯ ವ್ಯವಸ್ಥಾಪಕ ಬೂದಪ್ಪ, ಸ್ವಸಹಾಯ ಒಕ್ಕೂಟದ ಅಧ್ಯಕ್ಷೆ ಶಾಕೀರಾ ಬೇಗಂ, ದೀಪಾ ಜಾಧವ್, ಈಶಪ್ಪ ಹೂಗಾರ, ತರಬೇತಿ ಅಧಿಕಾರಿ ಲತಾ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error