ಗಂಗಾವತಿ : ಇನ್‌ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ : ಖಂಡನೆ

 ಇತ್ತೀಚಿಗೆ ಗಂಗಾವತಿ ರಾಯಚೂರು ಮುಖ್ಯರಸ್ತೆಯಲ್ಲಿರುವ ಇನ್‌ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ ನಡೆಸಿ, ಸಿಸ್ಟರ್‌ಗಳನ್ನು ಎಳೆದಾಡಿದ್ದು, ಮತ್ತು ಯೇಸು ಮೂರ್ತಿಯನ್ನು ಭಗ್ನಗೊಳಿಸಿ, ಗ್ಲಾಸ್‌ಗಳನ್ನು ಒಡೆದು ಹಾಕಿ ಚರ್ಚ್‌ನ ದ್ವಿಚಕ್ರ ವಾಹನವನ್ನು ದ್ವಂಸಗೊಳಿಸಿದ್ದು ಖಂಡನಾರ್ಹವಾಗಿದೆ ಎಂದು ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಎಂ. ಏಸಪ್ಪ ತಿಳಿಸಿದ್ದಾರೆ. 
ಕ್ಷುಲಕ ಕಾರಣ ಮುಂದಿಟ್ಟುಕೊಂಡು ಹಿಂದೂ ಮೂಲಭೂತವಾದಿಗಳು ಸುಮಾರು ೨೦೦ ಕ್ಕಿಂತಲೂ ಹೆಚ್ಚು ಜನ ಚರ್ಚ್ ಮೇಲೆ ದಾಳಿ ಮಾಡಿ ಸಿಸ್ಟರ್‌ಗಳನ್ನು ಎಳದಾಡಿ, ಆಸ್ತಿ ದ್ವಂಸಗೊಳಿಸಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಸ್ಪಂದಿಸಿ, ಆರು ಜನರನ್ನು ಬಂಧಿಸಿದ್ದಾರೆ. ಉಳಿದ ದುಷ್ಕರ್ಮಿಗಳ ಮೇಲೆ ಕ್ರಮ ಜರುಗಿಸದೇ ಇರುವುದರಿಂದ ದುಷ್ಕರ್ಮಿಗಳು ಚರ್ಚ್ ಫಾದರ್‌ಗೆ ಬೆದರಿಕೆ ಹಾಕುತ್ತಿರುವುದು ಖಂಡನೀಯವಾಗಿದೆ ಎಂದಿದ್ದಾರೆ. 
          ಪೊಲೀಸ್ ಇಲಾಖೆ ಈ ಘಟನೆಯನ್ನು ಸಮಗ್ರವಾಗಿ ವಿಚಾರಣೆ ನಡೆಸಿ, ಅಲ್ಪಸಂಖ್ಯಾತ ಆರಾಧನಾ ಮಂದಿರಗಳಿಗೆ ರಕ್ಷಣೆ ನೀಡಬೇಕು. ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕು. ಇಲ್ಲದಿದ್ದಲ್ಲಿ ಪ್ರಗತಿಪರ ಸಂಘಟನೆಗಳು ಉಗ್ರವಾದ ಹೋರಾಟವನ್ನು ಮಾಡಿ ಅಲ್ಪಸಂಖ್ಯಾತರ ರಕ್ಷಣೆಗೆ ನಿಲ್ಲುತ್ತೇವೆಂದು  ತಿಳಿಸಿದ್ದಾರೆ.
Please follow and like us:
error