ಬಸವರಾಜ ಆಕಳವಾಡಿ ಅವರ ಮುತ್ತು ಬಂದಾವ ಕೇರಿಗೆ ಪುಸ್ತಕಕ್ಕೆ ಕನಕ ಪುರಸ್ಕಾರ ಸನ್ಮಾನ

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಸವರಾಜ ಆಕಳವಾಡಿ ಅವರ ಮುತ್ತು ಬಂದಾವ ಕೇರಿಗೆ ಪುಸ್ತಕ ೨೦೧೪ ನೇ ಸಾಲಿನ ಕನಕಗೌರವ ಉತ್ತಮ ಪುಸ್ತಕ ಪುರಸ್ಕಾರ ಪಡೆದುಕೊಂಡಿದೆ.

ಜಗದ್ಗುರು ಶ್ರೀ ರೇವಣಸಿದ್ದೇಶ್ವರ ವಿದ್ಯಾಪೀಠ, ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ಮಹಾಮಠ, ಮನಸೂರ ಇವರು ೫೨೭ನೇ ಕನಕ ಜಯಂತಿ ಅಂಗವಾಇ ಧಾರವಾಡ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದ್ದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವದಲ್ಲಿ ಮುತ್ತು ಬಂದಾವ ಕೇರಿಗೆ ಕನಕ ಗೌರವ ಪುರಸ್ಕಾರ ಪಡೆದ ಬಸವರಾಜ ಆಕಳವಾಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ, ಸಾಹಿತಿಗಳಾದ ಮೋಹನ ನಾಗಮ್ಮನವರ, ಲಕ್ಷ್ಮಣಜೀ, ಡಾ.ನಿಂಗಣ್ಣ ಮುದೇನೂರ, ಡಾ.ಗೋವಿಂದರಾವ ತಳಕೋಡ, ಮಂಜುನಾಥ ಬೋಮ್ಮನಕಟ್ಟಿ, ಜಿ.ಜಿ.ದೊಡ್ಡವಾಡ ಉಪಸ್ಥಿತರಿದ್ದರು. ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ಮಹಾಮಠ, ಮುನಸೂರ ಪೀಠಾಧಿಪತಿ ಪರಮಪೂಜ್ಯ ಶ್ರೀ ಬಸವರಾಜ ದೇವರು ಸಾನಿಧ್ಯ ವಹಿಸಿದ್ದರು.

Related posts

Leave a Comment