ರಾಜ್ಯ ಕೈ ಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಮ್ ಮಲ್ಲಿಕಾರ್ಜುನ ನಾಗಪ್ಪ ನವರು ಭಾಗ್ಯನಗರಕ್ಕೆ ಬೇಟಿ

ಕೊಪ್ಪಳ : ಕರ್ನಾಟಕ ರಾಜ್ಯ ಕೈ ಮಗ್ಗ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷರಾದ ಎಮ್.ಮಲ್ಲಿಕಾರ್ಜುನ ನಾಗಪ್ಪನವರು ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಭಾಗ್ಯನಗರಕ್ಕೆ ಆಗಮಿಸಿ ಕೆ.ಎಚ್.ಡಿಸಿ. ಕೇಂದ್ರಕ್ಕೆ ಆಗಮಿಸಿ ನೇಕಾರರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು. ಬಳಿಕ ಸಿಬ್ಬಂದಿಗಳ ಸಭೆನಡೆಸಿ ನೇಕಾರರಿಗೆ ಮೂಲಭೂತ ಸೌಲಭ್ಯಗಳಾದ ವಸತಿ, ಆರೋಗ್ಯ ಸಮಸ್ಯೆ, ಉಚಿತ ಕಣ್ಣಿನ ತಪಾಸನೆ ನೂಲು, ಕಚ್ಚಾನೂಲು ಹಾಗೂ ಭೂರಹಿತರಿಗೆ ಪಟ್ಟಭೂಮಿ ವಿತರಿಸಲು ಸೂಕ್ತನಿರ್ದೇಶನ ನೀಡಿ ಸಲಹೆ ಸೂಚನೆ ಕೊಟ್ಟರು ಬಳಿಕ ನಡೆದಸಭೆಯಲ್ಲಿ ನೇಕಾರರಿಂದ ಸನ್ಮಾನ ಸ್ವೀಕರಿಸಿ ತಮ್ಮಅವಧಿಯಲ್ಲಿ ನೇಕಾರರಿಗೆ ಉತ್ತಮ ಪ್ರಮಾಣಿಕ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಬಡ ವಿದ್ಯಾರ್ಥಿಗಳಿಗೆ ಸೂಕ್ತ ಶೈಕ್ಷಣಿಕವಾಗಿ ಧನ ಸಾಹಯ ಸರ್ಕಾರದಿಂದ ಮಾಡಿಸುವುದಾಗಿ ಭರವಸೆ ನೀಡಿದರು.
           ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ನೇಕಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಮಾತನಾಡಿ ನೇಕಾರರಿಗೆ ವಸತಿ, ಮತ್ತು ರಸ್ತೆ, ನಿವೇಶನಗಳನ್ನು ಮಂಜೂರು ಮಾಡುವ ಸಲುವಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷರಾದ ಕೆ. ಕಾಳಪ್ಪ ನವರು ಉದ್ದೇಮಿಗಳಾದ ಶ್ರೀನಿವಾಸ ಗುಪ್ತಾ, ನೇಕಾರರ ಒಕ್ಕೂಟದ ಜಿಲ್ಲಾ ಕಾರ್ಯಧ್ಯಕ್ಷರಾದ ನಾಗರಾಜ ಬಳ್ಳಾರಿ, ನೇಕಾರರ ಒಕ್ಕೂಟದ ಲಕ್ಷ್ಮಣ್ಣ ಚಳ್ಳಮರದ, ರಮೇಶ ಹ್ಯಾಟಿ, ಕಿನ್ನಾಳ ವಿ.ಎಸ್.ಎಸ್.ಎನ್. ಡೈರಕ್ಟರ ರವಿಕುಮಾರ ಬುಡ್ಡೋಡಿ ಹಾಗೂ ಮಾಬುಸಾಬ ಹೀರಾಳ, ಸುರೇಶ ರ‍್ಯಾವಣಕಿ, ಜಿಲ್ಲಾ ಆಫೀಸರ್ ಡಿ. ಸಿತಾರಾಮನ್ ಹಾಗೂ ಕೆ.ಎಚ.ಡಿಸಿ. ಸಿಬ್ಬಂದಿಗಳು ನೇಕಾರ ಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮೋ.ನಂ : ೯೯೦೧೯೯೩೭೦೮
Please follow and like us:
error

Related posts

Leave a Comment