fbpx

೩೭೧(ಜೆ) ಫ್ರೀಡಂ ಪಾರ್ಕ ನಲ್ಲಿ ಹೈದ್ರಾಬಾದ ಕರ್ನಾಟಕ ಪ್ರತಿಭಟನೆ

ಕೊಪ್ಪಳ, ೧೩- ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂನ್ನು ಸಮರ್ಪಕವಾಗಿ ಜಾರಿಗೊಳಿಸಲು ಸೂಕ್ತವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಹಲವಾರು ಭಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡ ಮೇಲೂ ಯಾವುದೆ ಕ್ರಮ ಜರುಗಿಸದೇ ಇರುವದನ್ನು ಖಂಡಿಸಿ, ದಿನಾಂಕ: ೧೭ ಹಾಗೂ ೧೮ನೇ ಮಾರ್ಚ, ೨೦೧೫ ರಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ ನಲ್ಲಿ ಹೈದ್ರಾಬಾದ ಕರ್ನಾಟಕ ಪ್ರತಿಭಟನೆ ಹಮ್ಮಿಕೊಳಲಾಗಿದೆ.
    ಈ ಕುರಿತು ಪ್ರಕಟಣೆನೀಡುವ ಅವರು ಭಾರತ ಸರಕಾರ ಸಂವಿಧಾನದ ೩೭೧ ನೇ ಕಲಂಗೆ ತಿದ್ದುಪಡಿ ತಂದು ಹೈದ್ರಾಬಾದ ಕರ್ನಾಟಕದ ಜನತೆಗೆ ವಿಶೇಷ ಮೀಸಲಾತಿ ನೀಡಲು ಹಾಗೂ ಅಭಿವೃದ್ದಿಗಾಗಿ ಮಂಡಳಿ ರಚಿಸಲು ಅವಕಾಶ ನೀಡಿದೆ ಹಾಗೂ ಕರ್ನಾಟಕ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅಡಿಯಲ್ಲಿ ಕಾನೂನು ರಚಿಸಿ ಜಾರಿಗೆ ತಂದಿರುವದು ಸಂತೋಷದಾಯಕವಾಗಿದೆ. ಹೈದ್ರಾಬಾದ ಕರ್ನಾಟಕದಲ್ಲಿ ಸಂವಿಧಾನದ ೩೭೧(ಜೆ) ಕಲಂ ಜಾರಿಯಾದನಂತರ ಜನರಲ್ಲಿ ಒಂದು ರೀತಿಯ ಹೊಸ ಬದುಕಿನ ಸಂಚಲನ ಉಂಟಾಗಿತ್ತು, ಆದರೆ, ಸಂವಿಧಾನದ ೩೭೧(ಜೆ) ಕಲಂ ಜಾರಿಯಲ್ಲಿ ಸಾಕಷ್ಟು ತೊಂದರೆಗಳು, ಅಡಚಣೆಗಳು ಕಾಣುತ್ತಿದ್ದು ರಾಜ್ಯಸರ್ಕಾರದ ನೀತಿ ಖಂಡಿಸಿ ಧರಣಿ ಜರುಗಲಿದೆ.
    ಸಮಿತಿಯ ರಾಜ್ಯುಪಾಧ್ಯಕ್ಷ ರಜಾಕ ಉಸ್ತಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು ಎಲ್ಲಾಜನಪರ ಸಂಘಡನೆ ಮುಖಂಡರು ಕಾರ್ಯಕತ್ರರು ಆಗಮಿಸಿ ಯಶಸ್ವಿ ಗೋಳಿಸುವಂತೆ  ಜಿಲ್ಲಾ ಸಂಚಾಲಕ ಶಿವಕುಮಾರ ಕುಕನೂರ,ಜಿಲ್ಲಾ ಸಂಚಾಲಕ ಸಂತೋಷ ದೇಶಪಾಂಡೆ, ಜಿಲ್ಲಾ ಯುವ ಘಟಕ ಅಧ್ಯಕ್ಷ  ರಮೇಶ ತುಪ್ಪದ, ತಾಲೂಕ ಅಧ್ಯಕ್ಷ ಮಂಜುನಾಥ ಅಂಗಡಿ, ಕಾರ್ಯದರ್ಶಿ ಹುಲಗಪ್ಪ ಕಟಿಮನಿ ಹೆಚಿನಮಾಹಿತಿಗಾಗಿ ಬಾಗವಹಿಸುವ ಆಸಕ್ತರು ಜಿಲ್ಲಾ ಯುವ ಘಟಕ ಅಧ್ಯಕ್ಷ  ರಮೇಶ ತುಪ್ಪದ ೯೯೪೫೩೨೯೫೯೩ ಗೆ ಸಂಪಕ್ರಿಸಬಹುದಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.
    
Please follow and like us:
error

Leave a Reply

error: Content is protected !!