ಗ್ರಾ.ಪಂ. ಚುನಾವಣೆ : ೧೧೮೨ ನಾಮಪತ್ರ ಸಲ್ಲಿಕೆ

  ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ. ೧೯ ಮಂಗಳವಾರದಂದು ಜಿಲ್ಲೆಯಲ್ಲಿ  ಒಟ್ಟು ೧೧೮೨ ನಾಮಪತ್ರಗಳು ಸಲ್ಲಿಕೆಯಾಗಿವೆ.  
  ಕೊಪ್ಪಳ ತಾಲೂಕಿನಲ್ಲಿ ೩೬೨ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  ೩೧೯ ನಾಮಪತ್ರಗಳು.  ಕುಷ್ಟಗಿ ತಾಲೂಕಿನಲ್ಲಿ ೨೨೬ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೨೭೫ ಜನ ನಾಮಪತ್ರ ಸಲ್ಲಿಸಿದ್ದಾರೆ.  ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-೨೬೭, ಪ.ಪಂಗಡ-೧೬೩, ಹಿಂದುಳಿದ ಅ ವರ್ಗ-೧೩೪, ಹಿಂದುಳಿದ ಬ ವರ್ಗ-೨೪ ಹಾಗೂ ಸಾಮಾನ್ಯ ವರ್ಗದ-೫೯೪ ನಾಮಪತ್ರಗಳು ಸಲ್ಲಿಕೆಯಾಗಿವೆ.  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಈವರೆಗೆ ಒಟ್ಟು ೨೦೦೧ ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.  ನಾಮಪತ್ರ ಸಲ್ಲಿಕೆಗೆ ಮೇ. ೨೨ ಕೊನೆಯ ದಿನಾಂಕವಾಗಿದೆ .
Please follow and like us:
error