ಮಹಿಳೆಯರಿಗೆ ಹೊಲಿಗೆ ಯಂತ್ರಗಳ ಬಳಕೆ ಕುರಿತು ತರಬೇತಿ ಶಿಬಿರದ ಉದ್ಘಾಟನೆ.

ಕೊಪ್ಪಳ,ಸೆ,-15- ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳೆಯಲು ಹಾಗೂ ಸ್ವಾವಲಂಬಿ ಜೀವನ ಸಾಗಿಸಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸಾಕಾರಗೊಳಿಸಲು ಅದರ ಸದುಪಯೋಗ ಪಟಡೆದುಕೊಂಡು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸಾರ್ಥಕವಾಗಲು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜವಳಿ ಹಾಗೂ ಕೈಮಗ್ಗ ಇಲಾಖೆ ಉಪನಿರ್ದೇಶಕ ಎನ್.ಟಿ.ನೆಗಳೂರು ಕರೆ ನೀಡಿದರು.
  ಅವರು ಮಂಗಳವಾರ ಸಂಜೆ ಗವಿಮಠ ಹಿಂದೆ ಹೂವಿನಾಳ ರಸ್ತೆಯಲ್ಲಿರುವ ಎಂ ಎಸ್ ಕೆ ಗಾರ್ಮೆಂಟ್ಸ್ ನಲ್ಲಿ ಏರ್ಪಡಿಸಿದ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ಬಳಕೆ ಮಾಡಿಕೊಳ್ಳುವ ಬಗ್ಗೆ ಏರ್ಪಡಿಸಿದ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
    ಮುಂದುವರೆದು ಮಾತನಾಡಿದ ಅವರು ಮಹಿಳೆಯರ ಆರ್ಥಿಕ ಸಬಲಿಕರಣಕ್ಕಾಗಿ ಇಂತಹ ಯೋಜನೆಗಳನ್ನು ಸಮರ್ಪಕವಾಗಿ ಅನುಷಾನಗೊಂಡಾಗ ಮತ್ತು ಇದರ ಲಾಭ ಅವರಿಗೆ ಸಿಕ್ಕಾಗ ಯೋಜನೆಗಳ ಸಾಕಾರಗೊಂಡಂತಾಗುತ್ತದೆ ಇದರ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕ ಅಭಿವೃದ್ಧಿ ಮಾಡಿ
  ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪತ್ರಕರ್ತ ಎಂ.ಸಾದಿಕ ಅಲಿ ಮತನಾಡಿ ಮಹಿಳೆಯರಿಗೆ ನಿರುದ್ಯೋಗಿ ಯುವತಿಯರಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಎಂ ಎಸ್ ಕೆ ಗಾರ್ಮೆಂಟ್ಸ್ ತರಬೇತಿ ಕೇಂದ್ರ ಕಳೆದ ಕೆಲವು ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ ಇಲ್ಲಿ ಹಲವಾರು ಜನ ಮಹಿಳೆಯರು ವಿವಿಧ ತರಬೇರಿ ಪಡೆದು ಸ್ವಾವಲಂಬಿ  ಸಾಗಿಸುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಎಂದರು.
  ಹೈದ್ರಾಬಾದ್ ಜನ ವಿಮೋಚನಾ ವೇದಿಕೆ ಜಿಲ್ಲಾಧ್ಯಕ್ಷ ಮೈಲಪ್ಪ ಬಿಸರಳ್ಳಿ, ಹೆಚ್.ಆರ್.ಹೆಚ್.ಏಪ್.ಐ.ಎಲ್.ಕೆ ಜಿಲ್ಲಾ ಸಂಚಾಲಕ ಹನುಮಂತಪ್ಪ ಮ್ಯಾಗಳಮನಿ ಅತಿಥಿ ಭಾಷಣ ಮಾಡಿದರು.  ಗಂಗಾವತಿಯ ಸುವರ್ಣಗಿರಿ ಪತ್ರಿಕೆ ಸಂಪಾದಕ ಎಸ್.ಎಂ.ಪಟೇಲ್  ಮತ್ತು ಇಲಾಖೆಯ ಅಧಿಕಾರಿ ಅಮರದ್ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಉಪಥಿತರಿದ್ದು ಎಂ ಎಸ್ ಕೆ ಗಾರ್ಮೆಂಟ್ಸ್‌ನ ಪ್ರೊ. ಮಹಮ್ಮದ್ ಶಫೀಖ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿ ಮಹಿಳೆಯರು ಪಾಲ್ಗೊಂಡಿದ್ದ ಈ ಸಮಾರಂಭದ ನಿರೂಪಣೆ, ಸ್ವಾಗತ ಮತ್ತು ವಂದನಾರ್ಪಣೆಯನ್ನು ಧನರಾಜ್ ದೊಡ್ಡಮನಿ ನೆರವೇರಿಸಿದರು.

ಕೊಳ್ಳಲು ಮಹಿಳೆಯರು ಈ ತರಬೇತಿಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಕೆಂದು ಜವಳಿ ಹಾಗೂ ಕೈಮಗ್ಗ ಇಲಾಖೆ ಉಪನಿರ್ದೇಶಕ ಎನ್.ಟಿ.ನೆಗಳೂರು ಸಲಹೆನೀಡಿದರು.

Please follow and like us:
error